ಜಿಲ್ಲೆ

ದೇವದಾಸಿಯರ ಮಕ್ಕಳಿಗೆ ಉದ್ಯೋಗ ಮೀಸಲು ನೀಡಿ

Kopala - Raveendra V K

ಕೊಪ್ಪಳ: ಸರ್ಕಾರ ವಿವಿಧ ಯೋಜನೆಗಳಡಿ ಸೌಲಭ್ಯ ನೀಡುವಾಗ ದೇವದಾಸಿಯರು ಮತ್ತವರ ಮಕ್ಕಳಿಗೆ ತಂದೆ, ಗಂಡನ ಹೆಸರು ನಮೂದಿಸುವುದು ಐಚ್ಛಿಕಗೊಳಿಸಬೇಕು. ದೇವದಾಸಿ ಮಕ್ಕಳಿಗೆ ಎಲ್ಲ ಹಂತದಲ್ಲಿ ಉಚಿತ ಶಿಕ್ಷಣ ನೀಡಬೇಕು. ದೇವದಾಸಿ ಪದ್ಧತಿಗೆ ಒಳಪಟ್ಟವರ ಮರು ಸಮೀೆ ನಡೆಸಬೇಕು. ಮಾಸಾಶನ ಮೊತ್ತ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಶೇ.5ರಷ್ಟು ಮೀಸಲು ನೀಡಿ. ಆರ್ಥಿಕ ಅಭಿವೃದ್ಧಿ ಯೋಜನೆ ರೂಪಿಸುವಂತೆ ದೇವದಾಸಿ ಮಹಿಳೆಯರು ಹಕ್ಕೊತ್ತಾಯ ಮಂಡಿಸಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಚಿರ್ಲ್ಡನ್​ ಆ್​ ಇಂಡಿಯಾ ೌಂಡೇಶನ್​ ಮತ್ತು ಸ್ನೇಹಾ ಸಂಸ್ಥೆಯಿಂದ ದೇವದಾಸಿಯರು ಮತ್ತು ಅವರ ಮಕ್ಕಳ ಪುನರ್ವಸತಿಗಾಗಿ ಮಾಧ್ಯಮದವರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಯೋಜನೆ ರೂಪಿಸಿದರು ಸರಿಯಾಗಿ ತಲುಪುತ್ತಿಲ್ಲ. ಕಚೇರಿಗೆ ಅಲೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ಮಾತನಾಡಿ, ದೇವದಾಸಿ ಮಹಿಳೆಯರ ಪುನರ್ವಸತಿಗೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಅವುಗಳನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಿ. ಸಮೀೆಯಿಂದ ಬಿಟ್ಟು ಹೋದವರನ್ನು ಸೇರಿಸಲು ಮರು ಸರ್ವೇ ನಡೆಸಲು ಸರ್ಕಾರ ಆದೇಶಿಸಿದೆ. ಶ್ರೀ ಈ ಕಾರ್ಯ ಆಗಲಿದೆ ಎಂದರು.

ದೇವದಾಸಿ ಪುನರ್ವಸತಿ ಕೇಂದ್ರದ ಅಧಿಕಾರಿ ಪೂರ್ಣಿಮಾ ಏಳುಬಾವಿ ಮಾತನಾಡಿ, ನಿಗಮದಿಂದ ಅನೇಕ ಯೋಜನೆಗಳಿದ್ದು, ಅವುಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಎಲ್ಲ ಇಲಾಖೆಗಳು ಸೌಲಭ್ಯ ನೀಡುವಾಗ ಕರೆವ ಅರ್ಜಿಯಲ್ಲಿ ತಂದೆ ಹೆಸರು ಕಡ್ಡಾಯಗೊಳಿಸಬಾರದು. ಅದನ್ನೊಂದು ಆಯ್ಕೆಯಾಗಿ ಇಡಬೇಕೆಂಬ ಬೇಡಿಕೆ ಇದೆ. ಇದನ್ನು ಎಲ್ಲ ಇಲಾಖೆ ಅಧಿಕಾರಿಗಳು ಅರ್ಥ ಮಾಡಿಕೊಂಡು ಸೌಲಭ್ಯ ಕಲ್ಪಿಸಬೇಕಿದೆ ಎಂದು ಸಲಹೆ ನೀಡಿದರು.

ಪತ್ರಕರ್ತರಾದ ಹನುಮಂತ ಹಳ್ಳಿಕೇರಿ, ಬಸವರಾಜ ಕರುಗಲ್​, ಶರಣಪ್ಪ ಬಾಚಲಾಪುರ, ಹರೀಶ ಎಚ್​.ಎಸ್​., ರಾಜು ಬಿ.ಆರ್​., ಬಸವರಾಜ ಗುಡ್ಲಾನೂರ, ಸಮಾಜ ಕಲ್ಯಾಣ ಇಲಾಖೆ ಎ್​ಡಿಎ ಪರಶುರಾಮ, ಸ್ನೇಹಾ ಸಂಸ್ಥೆ ಮೆಂಟರ್​ ಸರೋಜಾ ಹವಳದ, ಪದಾಧಿಕಾರಿಗಳಾದ ಗಾಯತ್ರಿ, ಶೋಭಾ, ಶಕುಂತಲಾ, ಮಹಾಲಕ್ಷಿ$್ಮ ಇತರರಿದ್ದರು.