ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲೆಯಲ್ಲಿ ಡೆಂಘೆ ಮಹಾಮಾರಿ ಉಲ್ಬಣಗೊಳ್ಳುತ್ತಿದ್ದು ಆತಂಕ ಹೆಚ್ಚಿಸಿದೆ. ಈವರೆಗೆ 95 ಪ್ರಕರಣಗಳು ಕಾಣಿಸಿಕೊಂಡಿದ್ದು, ಪ್ರಸಕ್ತ ವರ್ಷದಲ್ಲಿ 100 ಗಡಿ ಸಮೀಪಿಸಿದೆ. ಬಹುತೇಕ ಪ್ರಕರಗಳಲ್ಲಿ ರೋಗಿಗಳು ಚೇತರಿಕೆ ಕಂಡಿರುವುದು ಸಮಾಧಾನಕರ ವಿಷಯವಾದರೂ ಸಕ್ರಿಯ ಪ್ರಕರಣಗಳು ವರದಿಯಾಗುತ್ತಿರುವುದು ದುಗುಡ ದ್ವಿಗುಣಗೊಳಿಸಿದೆ.
ರಾಜ್ಯಾದ್ಯಂತ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಏರುತ್ತಿದೆ. ಜಿಲ್ಲೆಯಲ್ಲೂ ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯ ಜ್ವರ ಬಂದರೂ ಜನರು ಡೆಂಘೆ ಭೀತಿಯಿಂದ ಬಳಲುವಂತಾಗಿದೆ. ಜಿಲ್ಲೆಯಲ್ಲಿ ಕಳೆದ ಜನೆವರಿಯಿಂದ ಈವರೆಗೆ 95 ಸಕ್ರಿಯ ಪ್ರಕರಣಗಳು ಕಾಣಿಸಿಕೊಂಡಿವೆ. ಮಳೆಗಾಲ ಆರಂಭವಾಗಿದ್ದು, ಸೊಳ್ಳೆ ಉತ್ಪತ್ತಿ ಹೆಚ್ಚಿದ್ದರಿಂದಲೇ ಅಧಿಕ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ವೈದ್ಯಾಧಿಕಾರಿಗಳು. ವಾತಾವರಣ ಬದಲಾವಣೆ ಆಗಿದ್ದು, ನೆಗಡಿ, ಕೆಮ್ಮು, ಜ್ವರ, ಮೈ&ಕೈ ನೋವಿನಿಂದ ಬಳಲುವುದು ಹೆಚ್ಚಿದೆ. ಇದೇ ಸಮಯದಲ್ಲಿ ಡೆಂಘೆ ಹಾವಳಿ ಹೆಚ್ಚಿದ್ದು ಜನರನ್ನು ನಿದ್ದೆಗೆಡುವಂತೆ ಮಾಡಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಪರೀೆಗಳನ್ನು ಹೆಚ್ಚಿಸಲಾಗಿದೆ. ತಪಾಸಣೆ ಹೆಚ್ಚಿದಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯೂ ನಿತ್ಯ ಎಲ್ಲ ಜಿಲ್ಲೆಗಳಿಂದ ಮಾಹಿತಿ ಪಡೆಯುತ್ತಿದ್ದು, ಸಕ್ರಿಯ ಪ್ರರಕಣಗಳ ಮೇಲೆ ನಿಗಾವಹಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರಗಳಲ್ಲಿ ಕಂಡುಬರುವ ಸಂಶಯಾಸ್ಪದ ಪ್ರಕರಣಗಳ ಮಾಹಿತಿ ಹಾಕುತ್ತಿದ್ದಾರೆ. ರೋಗ ಲಕ್ಷಣ ಆಧರಿಸಿ ಪರೀೆ ಮಾಡಿಸುವಂತೆ ಸೂಚಿಸಲಾಗುತ್ತಿದೆ.
ಸೊಳ್ಳೆ ಉತ್ಪತ್ತಿ ತಡೆಯಲು ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತಿದೆ. ಇಷ್ಟೆಲ್ಲ ಮುಂಜಾಗ್ರತಾ ಕ್ರಮಗಳ ನಡುವೆಯೂ ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಜನೆವರಿಯಿಂದ ಜು.8ವರೆಗೆ ಒಟ್ಟು 95 ಡೆಂ ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ 92 ರೋಗಿಗಳು ಚೇತರಿಕೆ ಕಂಡಿರುವುದು ಸಮಾಧಾನಕರ ವಿಷಯ. ಭಾನುವಾರ ಮತ್ತೆ ಮೂರು ಪ್ರಕರಣಗಳು ಕಾಣಿಸಿಕೊಂಡಿವೆ. ಗಂಗಾವತಿ ನಗರ, ಕೊಪ್ಪಳ ತಾಲೂಕಿನ ಚಿಕ್ಕ ಬಗನಾಳ ಗ್ರಾಮ, ಕನಕಗಿರಿ ತಾಲೂಕಿನ ಗಂಗನಾಳ ಗ್ರಾಮದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಈ ಗ್ರಾಮಗಳಲ್ಲಿ ಕಾಣಿಸಿಕೊಳ್ಳುವ ಜ್ವರ ಪ್ರಕರಣಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಚರಂಡಿ ಸ್ವಚ್ಛತೆ, ಲಾರ್ವಾಹಾರಿ ಮೀನು ಬಿಡುವಿಕೆ, ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಸಂಶಯಾಸ್ಪದ ಪ್ರರಕಣಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿವೆ. ಈವರೆಗೆ ಒಟ್ಟು 1,868 ಜ್ವರ ಪ್ರಕರಣಗಳು ಡೆಂಘೆ ಸಂಶಯ ಮೂಡಿಸಿವೆ. ಬಹುತೇಕ ಪ್ರಕರಣಗಳಲ್ಲಿ ಮಹಾಮಾರಿ ಲಕ್ಷಣಗಳಿದ್ದು, ಪರೀೆಗೆ ಮಾದರಿ ಸಂಗ್ರಹಿಸುವ ಕೆಲಸವಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಪರೀೆ ನಡೆಸಿ ಡೆಂಘೆ ದೃಢಪಡಿಸಲಾಗುತ್ತಿದೆ. ವೈರಲ್ ಫಿವರ್ ಸಹ ಡೆಂ ರೋಗ ಲಕ್ಷಣಗಳನ್ನು ಹೊಂದಿರಲಿದ್ದು, ಪ್ರಯೋಗಾಲಯದಲ್ಲಿ ತೀಕ್ಷ$್ಣ ಪರೀೆಗೆ ಒಳಪಡಿಸಿದಾಗಲೇ ಸ್ಪಷ್ಟತೆ ದೊರೆಯಲಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾತಿ ಹೆಚ್ಚಳ
ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀೆ ಮಾಡಿಸಿದವರ ವಿವರ ಮಾತ್ರ ಆರೋಗ್ಯ ಇಲಾಖೆ ಬಳಿ ಇದ್ದು, ಅಲ್ಲಿ ದೃಢಪಟ್ಟ ಪ್ರಕರಣಗಳ ಮಾಹಿತಿ ದೊರೆಯುತ್ತಿದೆ. ಉಳಿದಂತೆ ಬಹುತೇಕ ಜನರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಅಲ್ಲಿನ ರೋಗಿಗಳ ವಿವರ ಆರೋಗ್ಯ ಇಲಾಖೆ ಕೈ ಸೇರುತ್ತಿಲ್ಲ. ಜನರು ಚಿಕಿತ್ಸೆ ಪಡೆದು ಮರಳುತ್ತಿದ್ದಾರೆ. ಭಾನುವಾರದ ರಜಾ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದ ಕಾರಣ ರೊಗಿಗಳು ತೊಂದರೆ ಅನುಭವಿಸುವ ಟನೆಗಳು ನಡೆಯುತ್ತಿವದೆ. ಖಾಸಗಿ ಆಸ್ಪತ್ರೆಯಲ್ಲಿ ನಿರ್ವಹಣೆ ಆಗದೆ ಅಥವಾ ಬೇರೆಡೆ ವರ್ಗಾವಣೆ ಆದ ರೋಗಿಗಳ ವಿವರಗಳೂ ಸರಿಯಾಗಿ ವರದಿಯಾಗುತ್ತಿಲ್ಲ. ಅಕ್ಕ&ಪಕ್ಕದ ಜಿಲ್ಲೆಗಳಲ್ಲಿ ಸಂಶಯಾಸ್ಪದ ಡೆಂ ಪ್ರಕರಣಗಳಲ್ಲಿ ಸಾವುಗಳು ಸಂಭವಿಸುತ್ತಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಬೇಕಿದೆ.
ಜಿಲ್ಲೆಯಲ್ಲಿ 95 ಡೆಂ ಪ್ರಕರಣ ಕಾಣಿಸಿಕೊಂಡರೂ ಮೂರು ಪ್ರಕರಣ ಮಾತ್ರ ಸಕ್ರಿಯವಾಗಿವೆ. 92ರಲ್ಲಿ ರೋಗಿಗಳು ಚೇತರಿಸಿಕೊಂಡಿದ್ದಾರೆ. ಮಾದರಿ ಪರೀೆಗಳನ್ನು ಹೆಚ್ಚಿಸಲಾಗಿದೆ. ವೈದ್ಯಾಧಿಕಾರಿಗಳ ಸಭೆ ನಡೆಸಿದ್ದು ಎಚ್ಚರವಹಿಸಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುವುದು. ರ್ಯಾಪಿಡ್ ಕಿಟ್ನಲ್ಲಿ ಪರೀಸಿದ ವರದಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ದೃಢಪಡಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ಇರಬೇಕು. ಡಾ.ಟಿ.ಲಿಂಗರಾಜು. ಡಿಎಚ್ಒ ಕೊಪ್ಪಳ.ಡಾ.ಟಿ.ಲಿಂಗರಾಜು. ಡಿಎಚ್ಒ ಕೊಪ್ಪಳ.