ಕೊಪ್ಪಳ: ಪರೀಾ ಶುಲ್ಕ ಕಡಿಮೆ ಮಾಡುವಂತೆ ಒತ್ತಾಯಿಸಿ ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರಾಚಾರ್ಯ ಡಿ.ಎಚ್.ನಾಯ್ಕಗೆ ಮನವಿ ಸಲ್ಲಿಸಿದರು.
ಕಾಲೇಜಿಗೆ ಬರುವವರು ಬಹುತೇಕ ಬಡವರ ಮಕ್ಕಳು. ಈಗಿರುವ ಖರ್ಚುಗಳನ್ನು ಸರಿದೂಗಿಸಲು ಕಷ್ಟಪಡಬೇಕಿದೆ. ಹೀಗಿರುವಾಗ ಪ್ರತಿ ಸೆಮಿಸ್ಟರ್ಗೆ 1,300ರೂ. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕ ಹೊರೆಯಾಗುತ್ತಿದೆ. ಶುಲ್ಕ ಹೊಂದಿಸಲು ಕಷ್ಟವಾಗುತ್ತಿದೆ. ಸರ್ಕಾರಿ ಕಾಲೇಜುಗಳು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಶುಲ್ಕ ವಿಧಿಸಬೇಕು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಬೇಕು. ಪರೀಾ ಶುಲ್ಕ ಮೊತ್ತವನ್ನು ಅರ್ಧದಷ್ಟು ಕಡಿತ ಮಾಡಬೇಕು. ಮೊದಲ ಸೆಮಿಸ್ಟರ್ ಲಿತಾಂಶ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆ ಮನ್ನಿಸಬೇಕು. ಹೊರೆಯಾಗದಂತೆ ಶುಲ್ಕ ವಿಧಿಸಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಾದ ಗಂಗರಾಜ ಅಳ್ಳಳ್ಳಿ, ರಾಜು, ಪ್ರತಿಭಾ, ಮಂಜುಳಾ, ನಾಗರಾಜ, ಗವಿಸಿದ್ದ ಇತರರಿದ್ದರು.