ಜಿಲ್ಲೆ

ಮೆತಗಲ್​ಗೆ ಡಿಸಿ ಭೇಟಿ

Kopala - Raveendra V K

ಕೊಪ್ಪಳ: ತಾಲೂಕಿನ ಮೆತಗಲ್​ ಗ್ರಾಮದ ಬಳಿ ನಬಾರ್ಡ್​ನಿಂದ ನಿರ್ಮಿಸುತ್ತಿರುವ ಹಣ್ಣು ಬೆಳೆಗಳ ಸಂಸ್ಕರಣ ಟಕಕ್ಕೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ನಬಾರ್ಡ್​ ಅನುದಾನದಡಿ ಸಂಸ್ಕರಣ ಟಕ ನಿರ್ಮಿಸುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತೋಟಗಾರಿಕೆ, ಕೃಷಿ ಅಧಿಕಾರಿಗಳು ವಿವರಿಸಿದರು. ಅಲ್ಲಿಂದ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮಕ್ಕೆ ತೆರಳಿದ ಡಿಸಿ, ಕೃಷಿ ಹೊಂಡ, ಉದ್ಯೋಗ ಖಾತ್ರಿ ಯೋಜನೆ, ದ್ರಾ, ದಾಳಿಂಬೆ ಬೆಳೆ ವೀಸಿದರು. ತಾವರಗೇರಾದ ಮೋರಿಂಗಾ ಾಮ್​ರ್, ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ಗ್ರಾಮದ ದೇವೇಂದ್ರಪ್ಪ ಬಳೂಟಗಿ ತೋಟಕ್ಕೆ ತೆರಳಿ ಮಾಹಿತಿ ಪಡೆದರು. ರೈತರು ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಕ್ಷೇತ್ರದ ಸ್ಥಿತಿ&ಗತಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಉಪ ಕೃಷಿ ನಿರ್ದೇಶಕ ಸಿದ್ದೇಶ್ವರ ಎಲ್​, ಮೀನುಗಾರಿಕೆ ಉಪನಿರ್ದೇಶಕ ಡಾ.ಶ್ರೀನಿವಾಸ ಕುಲಕರ್ಣಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ವಿಸ್ತರಣಾ ಮುಂದಾಳು ಡಾ.ರವಿ, ಕೃಷಿ ತಂತ್ರಜ್ಞ ಸಂಸ್ಥೆ ಉಪಾಧ್ಯಕ್ಷ ವೀರಣ್ಣ ಕಮತರ ಇತರರಿದ್ದರು.