ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಡಿಸಿ ವಿಚಾರಣೆಗೆ ಹಾಜರಾಗಲು ಸುಪ್ರೀಂ ಸೂಚಿಸಿದೆ.
ಅರ್ಚಕ ವಿದ್ಯಾದಾಸ್ ಬಾಬಾ ತಮಗೆ ಪೂಜೆ ಮಾಡಲು ಅನುಮತಿಸುವಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆಡಳಿತಾಧಿಕಾರಿ ಪ್ರಕಾಶರಾವ್ ಅಡ್ಡಿಪಡಿಸುತ್ತಿದ್ದಾರೆಂದು ಆಕ್ಷೇಪಿಸಿದ್ದಾರೆ. 2018ರಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದೆ. ಪೂಜೆಗೆ ಅವಕಾಶವಿದ್ದರೂ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬಾಬಾ ಪರ ವಕೀಲರು ನ್ಯಾಯಾಲಯದ ಮುಂದೆ ನಿವೇದನೆ ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆ.11ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎನ್ನಲಾಗಿದೆ.
ಈ ಸಂಬಂಧ ವಿಜಯವಾಣಿಗೆ ಪ್ರತಿಕ್ರಿಯಿಸಿದ ಡಿಸಿ, ನನಗೆ ಈವರೆಗೂ ಲಿಖಿತ ನೋಟಿಸ್ ಬಂದಿಲ್ಲ. ನಮ್ಮ ವಕೀಲರ ಮೂಲಕ ಮಾಹಿತಿ ಪಡೆಯುವೆ. ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿದ್ದಲ್ಲಿ ಹಾಜರಾಗುವೆ ಎಂದರು.