ಜಿಲ್ಲೆ

ರಸ್ತೆ ಸುರಕ್ಷತೆಗೆ ಕ್ರಮವಹಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

Kopala - Raveendra V K

ಕೊಪ್ಪಳ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿ ಇತರ ರಸ್ತೆಗಳಲ್ಲಿ ಸುರಕ್ಷತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಸ್ತೆ ತಿರುವುಗಳಲ್ಲಿ ಸೂಚನಾ ಲಕ ಹಾಕಿ. ಅಗತ್ಯವಿದ್ದಲ್ಲಿ ಬೆಳಕು, ಸಿಸಿಟಿವಿ ಕ್ಯಾಮೆರಾ ಅಳವಡಿಸಿ. ವಾಹನ ಸವಾರರಿಗೆ ಅರ್ಥವಾಗುವಂತೆ ಸೂಚನಾ ಲಕಗಳಿರಲಿ. ಹಿಟ್ನಾಳ ಟೋಲ್​ ಹುನುಗುಂದ ರಸ್ತೆಗಳಲ್ಲಿ ಸರಿಯಾದ ಸೂಚನಾ ಲಕಗಳಿಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ದೊಡ್ಡ ಸೂಚನಾ ಲಕ ಹಾಕಲು ಕಳೆದ ಸಭೆಯಲ್ಲಿ ಸೂಚಿಸಲಾಗಿದೆ. ತಕ್ಷಣ ಈ ಬಗ್ಗೆ ಕ್ರಮವಹಿಸಿ. ಯಾವ ರಸ್ತೆಗಳಲ್ಲಿ ಹೆಚ್ಚು ಭಾರವಾದ ವಾಹನಗಳು ಓಡಾಡುತ್ತವೆ ಎಂದು ಮಾಹಿತಿ ಕಲೆ ಹಾಕಿ. ಮುಖ್ಯ ರಸ್ತೆಗಳಲ್ಲಿ ಗುಂಡಿಗಳಿದ್ದರೆ ಅವುಗಳನ್ನು ಮುಚ್ಚಿಸಿ. ಟ್ರಾಫಿಕ್​ ಸಮಸ್ಯೆಗಳಾಗದಂತೆ ನಗರದಲ್ಲಿ ುಟ್​ಪಾತ್​ ತೆರವುಗೊಳಿಸಿ. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಸೂಚಿಸುವಂತೆ ತಿಳಿಸಿದರು.

ಎನ್​ಎಚ್​ಗಳಲ್ಲಿ ಕೆಲವೆಡೆ ಲೈಟಿಂಗ್​, ಸಿಸಿಟಿವಿ ಕ್ಯಾಮೆರಾ, ಸೂಚನಾ ಲಕ ಅಳವಡಿಸಿಲ್ಲ. ತಕ್ಷಣ ಅವುಗಳನ್ನು ಅಳವಡಿಸಿ. ಮುಂದಿನ ಸಭೆಯೊಳಗೆ ಎಲ್ಲ ಕೆಸಲಗಳನ್ನು ಪೂರ್ಣಗೊಳಿಸರಬೇಕೆಂದು ತಾಕೀತು ಮಾಡಿದರು. ಲೋಕೋಪಯೋಗಿ ಇಲಾಖೆ ಇಇ ಹೇಮಂತರಾಜ್​, ಆರ್​ಟಿಒ ಕೆ.ದಾಮೋದರ, ಡಿಡಿಪಿಯು ಜಗದೀಶ, ಎನ್​ಎಚ್​ಎಐ ಪ್ರತಿನಿಧಿ ಅಜಿಂಕ ನವಲೆ, ಸೈಟ್​ ಇಂಜಿನಿಯರ್​ ದಾನೇಶ್ವರ ಇತರರಿದ್ದರು.