ಜಿಲ್ಲೆ

ಪದವೀಧರ ಕ್ಷೇತ್ರ ಚುಣಾವಣೆಗೆ ಅಗತ್ಯ ತಯಾರಿ, ಡಿಸಿ ನಲಿನ್​ ಅತುಲ್​ ಮಾಹಿತಿ

district koppal dc naleen athul meeting about election

ಕೊಪ್ಪಳ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜೂ.3ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತದಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದ್ದಾರೆ.

ಮತದಾರರಿಗೆ ವೋಟರ್​ ಸ್ಲಿಪ್​ ವಿತರಿಸಲಾಗಿದೆ. ತಲುಪಿರದಿದ್ದಲ್ಲಿ ಮತದಾರರ ಸೌಲಭ್ಯ ಕೇಂದ್ರಗಳಿಂದ ಮಾಹಿತಿ ಪಡೆಯಬಹುದು. ಮತದಾನದ ದಿನದಂದು ಮತಗಟ್ಟೆಯಲ್ಲಿ ಬೂತ್​ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಲೂ ಅವಕಾಶವಿದೆ. ಈ ಚುನಾವಣೆ ಪ್ರಾಶಸ ಮತದಾನವಾಗಿದೆ. ಮತದಾರರು ಮತಪತ್ರದಲ್ಲಿ ಅಭ್ಯರ್ಥಿಗೆ ಪ್ರಾಶಸದ ಮತ ನೀಡಬೇಕು. ಯಾವುದೇ ಭಾಷೆ, ಸಂಖ್ಯೆಯಲ್ಲಿ ನೀಡಬಹುದು. ಮೊದಲನೇ ಪ್ರಾಶಸ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು. (ಮೊದಲನೇ ಪ್ರಾಶಸ ಮತವನ್ನು ಸಂಖ್ಯೆ1 ರಿಂದ ಗುರುತಿಸಬೇಕು). ಉಳಿದ ಅಭ್ಯರ್ಥಿಗಳಿಗೆ ಸಂಖ್ಯೆ 2 ರಿಂದ ಆಯ್ಕೆಯನುಸಾರ ನೀಡಬೇಕು. ಒಬ್ಬ ಅಭ್ಯರ್ಥಿಗೆ ನೀಡಿದ ಸಂಖ್ಯೆ ಇನ್ನೊಬ್ಬರಿಗೆ ನೀಡುವಂತಿಲ್ಲ. ಗೌಪ್ಯತೆ ಕಾಪಾಡಿ. ಮತಗಟ್ಟೆಗೆ ಮೊಬೈಲ್​ ಹಾಗೂ ಇತರ ಎಲೆಕ್ಟ್ರಾನಿಕ್​ ವಸ್ತು ಕೊಂಡೊಯ್ಯುವಂತಿಲ್ಲ.

ಮತಪತ್ರದಲ್ಲಿ ಸಹಿ, ಹೆಸರು, ಪಕ್ಷದ ಗುರುತು ಅಥವಾ ಚಿತ್ರ ಇರಬಾರದು. ಮತಗಟ್ಟೆಯಲ್ಲಿ ನೀಡಿದ ಪೆನ್​ನಿಂದ ಮಾತ್ರ ಮತ ಹಾಕಬೇಕು. ಜಿಲ್ಲೆಯ 24 ಮತಗಟ್ಟೆಗಳಲ್ಲಿ 18ರಲ್ಲಿ ವೆಬ್​ಕಾಸ್ಟಿಂಗ್​ ಉಳಿದ ಮತಗಟ್ಟೆಯಲ್ಲಿ ವಿಡಿಯೋಗ್ರಾಫಿ ವ್ಯವಸ್ಥೆ ಮಾಡಲಾಗಿದೆ. ಮತದಾನ ಕೇಂದ್ರಗಳಿಗೆ 17 ಸೆಕ್ಟರ್​ ರೂಟ್​ ಗುರುತಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ ಕಾಲೇಜು, ವಿದ್ಯಾಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಕಚೇರಿ, ಬ್ಯಾಂಕ್​ಗಳು, ಕಾರ್ಖಾನೆ, ಕೈಗಾರಿಕಾ ಸಂಸ್ಥೆ, ಸಹಕಾರ ರಂಗ, ಔದ್ಯಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾಯಂ ಅಥವಾ ದಿನಗೂಲಿ ಪದವೀಧರರು, ಶಿಕ್ಷಕರು ಮತದಾನ ಮಾಡಬೇಕು. ಮತದಾನಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ವಿಶೇಷ ಸಾಂದರ್ಭಿಕ ರಜೆ ನೀಡಿದೆ. ಅರ್ಹರು ಸೌಲಭ್ಯ ಪಡೆಯಬೇಕು. ಜೂ.3ರಂದು ತಪ್ಪದೇ ಮತದಾನ ಮಾಡಬೇಕೆಂದು ಮನವಿ ಮಾಡಿದ್ದಾರೆ.