ಜಿಲ್ಲೆ

ಸಹಾಯವಾಣಿ ಕೇಂದ್ರ ಆರಂಭ

Kopala - Raveendra V K

ಕೊಪ್ಪಳ: ಜಾತಿ, ಆದಾಯ ಪ್ರಮಾಣ ಪತ್ರ ಪಡೆಯುವ ಸಂಬಂಧ ಸಾರ್ವಜನಿಕರ ಸ್ಪಂದನೆಗೆ ಜಿಲ್ಲಾಡಳಿತದಿಂದ ಸಹಾಯವಾಣಿ ಸ್ಥಾಪಿಸಿದ್ದಾಗಿ ಡಿಸಿ ನಲಿನ್​ ಅತುಲ್​ ತಿಳಿಸಿದ್ದಾರೆ.

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿದೆ. ವಿಧ್ಯಾರ್ಥಿಗಳ ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಕ್ಕೆ ತ್ವರಿತವಾಗಿ ಸ್ಪಂದಿಸಲು ಡಿಸಿ ಕಚೇರಿ ಚುನಾವಣೆ ಶಾಖೆ ಪಕ್ಕದಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಪ್ರಮಾಣ ಪತ್ರ ಪಡೆಯಲು ತೊಂದರೆಯಾದಲ್ಲಿ ವಿಧ್ಯಾರ್ಥಿಗಳು, ಸಾರ್ವಜನಿಕರು 8277862921 ಸಂಖ್ಯೆಗೆ ಕಚೇರಿ ಅವಧಿಯಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು. ಎಲ್ಲ ತಹಸೀಲ್ದಾರ್​ಗಳಿಗೆ ತ್ವರಿತ ಕ್ರಮಕ್ಕೆ ಸೂಚಿಸಿದ್ದು ಜನರು ಆತಂಕಪಡೆಬೇಕಿಲ್ಲ. ಸಹಾಯವಾಣಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಮಾತ್ರ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.