ಕೊಪ್ಪಳ: ಭೂ ಸ್ವಾಧಿನ ಪ್ರಕರಣವೊಂದಲ್ಲಿ ನ್ಯಾಯಾಲಯದಿಂದ ಜಪ್ತಿಗೆ ಆದೇಶವಾಗಿದ್ದ ಕೊಪ್ಪಳ ಡಿಸಿ ಕಾರು ಸರ್ವಿಸ್ ನೆಪದಲ್ಲಿ ಶೋ ರೋಮ್ ಸೇರಿದೆ ಎಂಬ ಆರೋಪ ಕೇಳಿ ಬಂದಿದೆ.
ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಲಯ ಜಪ್ತಿ ಮಾಡುವಂತೆ ಆದೇಶಿಸಿದ್ದ ವಾಹನ ಸಂಖ್ಯೆ ಕೆಎ 01 ಜಿ 9869 ಸದ್ಯ ಕೊಪ್ಪಳದಲ್ಲಿಲ್ಲ. ಬದಲಾಗಿ ಹೊಸಪೇಟೆಯ ಟೊಯೋಟಾ ಶೋ ರೂಮ್ನಲ್ಲಿದೆ. ಜಯನಗರದ ರಸ್ತೆ ವಿಸ್ತರಣೆಗೆ ಖಾಸಗಿ ಭೂಮಿ ಸ್ವಾಧಿನ ಪಡಿಸಿಕೊಂಡಿದ್ದು ಪರಿಹಾರ ನೀಡಿಲ್ಲ. ಪ್ರಕರಣದಲ್ಲಿ ಭೂ ಮಾಲೀಕರಿಗೆ ಪರಿಹಾರ ವಿತರಣೆಗೆ ನ್ಯಾಯಾಲಯ ಡಿಸಿಗೆ ಸೂಚಿಸಿದೆ. ಅವಧಿಯಲ್ಲಿ ನೀಡದ ಕಾರಣ ಕಾರ್ ಸೇರಿ ಕಚೇರಿ ಸಾಮಾನು ಜಪ್ತಿಗೆ ಆದೇಶಿಸಿದೆ.
ಏ.17 ರಂದು ಕೋರ್ಟ್ ಸಿಬ್ಬಂದಿ ಕಾರು ಜಪ್ತಿಗೆ ಕೊಪ್ಪಳಕ್ಕೆ ಬಂದಾಗ ಡಿಸಿ ಕಾರ್ ಕೀ ಕೊಟ್ಟಿರಲಿಲ್ಲ. ಮರು ದಿನ ಕಚೇರಿ ಕೆಲಸ ಹಿನ್ನೆಲೆ ಹೊರ ಹೋಗಿದೆ. ಸದ್ಯ ಸರ್ವಿಸ್ ಹೆಸರಿನಲ್ಲಿ ಶೋ ರೂಮ್ನಲ್ಲಿದೆ. 2 ಲಕ್ಷ ಕಿ.ಮೀ. ಓಡಿದಾಗಲೇ ಸರ್ವಿಸ್ ಮಾಡಿಸಲಾಗಿದೆ. ಸದ್ಯ ಆಯಿಲ್ ಬದಲಾಯಿಸಬೇಕಿರುವ ಕಾರಣದಿಂದ ಶೋರೂಮ್ಗೆ ಬಿಡಲಾಗಿದೆ ಎನ್ನಲಾಗಿದೆ. ಆದರೆ, ಜಪ್ತಿ ಆದೇಶ ಹಿನ್ನೆಲೆಯಲ್ಲಿ ತಪ್ಪಿಸಿಕೊಳ್ಳಲು ಕಾರ್ ಶೋರೂಮ್ನಲ್ಲಿ ಬಿಟ್ಟಿದ್ದಾರೆಂಬ ಆರೋಪ ಕೇಳಿ ಬರುತ್ತಿವೆ.