ಜಿಲ್ಲೆ

ಡೇ ಕೇರ್​ ಸೆಂಟರ್​ ಉದ್ಘಾಟನೆ ಡಿ.27ಕ್ಕೆ

Kopala - Raveendra V K

ಕೊಪ್ಪಳ: ಅತಿ ಕಡಿಮೆ ದರದಲ್ಲಿ ಎಲ್ಲ ವರ್ಗದ ಜನರಿಗೆ ವೈದ್ಯಕಿಯ ಸೇವೆ ಒದಗಿಸಲು ಲಯನ್ಸ್​ ಕ್ಲಬ್​, ಚಾರಿಟಬಲ್​ ಟ್ರಸ್ಟ್​ ಮತ್ತು ಮಲ್ಲಿಕಾರ್ಜುನ ಸೋಮಲಾಪುರ ಸ್ಮಾರಕ ಟ್ರಸ್ಟ್​ನಿಂದ ನಗರದ ಲಯನ್ಸ್​ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಲಯನ್ಸ್​ ಡೇ ಕೇರ್​ ಕೇಂದ್ರ ಆರಂಭಿಸಿದ್ದು  ಡಿ.27 ಕ್ಕೆ ಉದ್ಘಾಟನೆಯಾಗಲಿದೆ ಎಂದು ಕ್ಲಬ್​ ಕಾರ್ಯದರ್ಶಿ ಪ್ರದಿಪ ಸೋಮಲಾಪುರ ತಿಳಿಸಿದರು.

ಹೊರ ರೋಗಿಗಳಿಗೆ 10ರೂ. ವೆಚ್ಚದಲ್ಲಿ ಸೌಲಭ್ಯ ಸಿಗಲಿದೆ. ರಕ್ತ ಪರೀೆ, ಡೇ ಕೇರ್​ ಸೌಲಭ್ಯ ಜತೆಗೆ ಸಾರ್ವಜನಿಕರಿಗೆ ಅಗತ್ಯ ವೈದ್ಯಕಿಯ ಚಿಕಿತ್ಸಾ ಸಲಹೆಗಳನ್ನು ನೀಡಲು ಉಚಿತ ಸಹಾಯವಾಣಿ ಆರಂಭಿಸಲಾಗುವುದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜತೆಗೆ ಆಕ್ಸಿಜನ್​ ಕಾನ್ಸ್​ಂಟ್ರೇಟರ್​, ನೆಬ್ಯುಲೇಜರ್​, ವೀಲ್​ ಚೇರ್​, ರೋಗಿಗಳ ಹಾಸಿಗೆ, ವಾಕಿಂಗ್​ ಸಲಕರಣೆಗಳನ್ನು ಕಡಿಮೆ ದರದಲ್ಲಿ ಅವರಿಗೆ ಅಗತ್ಯ ಇರುವಷ್ಟು ದಿನ ಬಾಡಿಗೆ ನೀಡಲಾಗುವುದು. ಜನೌಷಧ ಮಾದರಿಯಲ್ಲಿ ಎಲ್ಲ ಔಷಧಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ವಿತರಿಸಲಾಗುವುದು. ಇದರೊಂದಿಗೆ ಜನರ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಲಯನ್ಸ್​ ಜಿಲ್ಲಾ ಗವರ್ನರ್​ ಮನೋಜ್​ ಎಲ್​. ಮಾಣಿಕ್​, ಆಡಳಿತ ಮಂಡಳಿ ಸದಸ್ಯ ರವಿ ಎಲ್​. ನಾಡಿಗೇರ, ವಿಭಾಗೀಯ ಸಲಹೆಗಾರ ಆನಂದ ಫೋಟ್ನಿಸ್​ ಹಾಗೂ ರಿಜನಲ್​ ಮೆಂಟರ್​ ಸುಗ್ಗಲಾ ಯಳಮಲಿ ಭಾಗಿಯಾಗುವುದಾಗಿ ಹೇಳಿದರು.

ಲಯನ್ಸ್​ ಕ್ಲಬ್​ ಅಧ್ಯಕ್ಷ ಪರಮೇಶ್ವರಪ್ಪ ಕೊಪ್ಪಳ, ಬಸವರಾಜ ಬೊಳ್ಳೊಳ್ಳಿ, ವೆಂಕಟೇಶ ಶಾನಭಾಗ್​ ಇತರರಿದ್ದರು.