ಜಿಲ್ಲೆ

ಬೆಳೆ ಮಾಹಿತಿ ದಾಖಲಿಸಲು ಸೂಚನೆ

ಕೊಪ್ಪಳ: ಮುಂಗಾರು ಬೆಳೆ ಸಮೀಕ್ಷೆಯಲ್ಲಿ ರೈತರು ಮೊಬೈಲ್​ ಆ್ಯಪ್​ ಮೂಲಕ ಬೆಳೆ ಮಾಹಿತಿ ಖುದ್ದಾಗಿ ದಾಖಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್​ ರುದ್ರೇಶಪ್ಪ ತಿಳಿಸಿದ್ದಾರೆ.

ಜೂ.22ರಿಂದ ಮುಂಗಾರು ಬೆಳೆ ಸಮೀೆ ಆರಂಭವಾಗಿದೆ. ರೈತರು ಆಂಡ್ರಾಯ್ಡ್​ ಆ್ಯಪ್​ ಮೂಲಕ ವಿವರಗಳನ್ನು ತಾವೇ ಸ್ವತ@ ಮೊಬೈಲ್​ ತಂತ್ರಾಶದ ಮೂಲಕ ದಾಖಲಿಸಬಹುದು. ಗೂಗಲ್​ ್ಲೇಸ್ಟೋರ್​ನಿಂದ Crop Survey Kharif 2024 ಆ್ಯಪ್​ ಡೌನ್ಲೋಡ್​ ಮಾಡಿಕೊಂಡು ಬೆಳೆ ವಿವಿರ ದಾಖಲಿಸಿ. ಜಿಲ್ಲೆಯಲ್ಲಿ 43,4326 ಬೆಳೆ ತಾಕುಗಳಿದ್ದು, ರೈತರು ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕೆಂದು ವಿನಂತಿಸಿದ್ದಾರೆ.