ಕೊಪ್ಪಳ: 2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿರುವುದಾಗಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ತಿಳಿಸಿದ್ದಾರೆ.
2023-&24ನೇ ಸಾಲಿನ ಮುಂಗಾರು & ಹಿಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ನಿರಂತರ ಮೇಲ್ವಿಚಾರಣೆ, ವಿಮರ್ಶೆ ಹಾಗೂ ಮಾರ್ಗದರ್ಶನದ ಫಲಿತಾಂಶವಾಗಿ ವಿವಿಧ ವಿಫಿಯಗಳಿಗೆ ಸಂಬಂಧಿಸಿದಂತೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಉತ್ತಮ ಸಾಧನೆ ಮಾಡಿರುವ ಕಾರಣ ರಾಫ್ಟ್ರಿ ಮಟ್ಟದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಶಸ್ಥಿಯನ್ನು ನೀಡಲಾಗಿದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 74,781 ರೈತರನ್ನು ಬೆಳೆವಿಮೆ ನೋಂದಾವಣೆ ಮಾಡಲಾಗಿರುತ್ತದೆ. ಆದರೆ ಮುಂಗಾರು ಹಂಗಾಮಿನಲ್ಲಿ ಮಳೆ ಆಗದೇ ಕಾರಣ ಬರಗಾಲ ಎಂದು ಘೋಫಿಣೆ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಮೀಕ್ಷೆಯನ್ನು ನಡೆಸಿ ಬೆಳೆವಿಮೆ ಯೋಜನೆಯಡಿ ಒಟ್ಟು 33,375 ರೈತರಿಗೆ 26.17 ಕೋಟಿ ಮಧ್ಯತರ ಪರಿಹಾರ ಹಾಗೂ ಬೆಳೆ ಕಟಾವು ಆಧಾರದ ಮೇಲೆ 37,730 ರೈತರಿಗೆ ರೂ 51.88 ಕೋಟಿ ಒಟ್ಟಾರೆ 71,105 ರೈತರಿಗೆ 78.55 ಕೋಟಿ ರೂ ಬೆಳೆವಿಮೆ ಪರಿಹಾರ ರೈತರ ಖಾತೆಗೆ ಜಮಾ ಆಗಿರುತ್ತದೆ. ಇದೇ ರೀತಿ ಹಿಂಗಾರು ಹಂಗಾಮಿನಲ್ಲಿಯೂ ಸಹ 5311 ರೈತರಿಗೆ ರೂ. 6.74 ಕೋಟಿ ಬೆಳೆವಿಮೆ ಪರಿಹಾರ ರೈತರ ಖಾತೆಗೆ ಜಮಾ ಆಗಿರುತ್ತದೆ.