ಜಿಲ್ಲೆ

ಕೊಪ್ಪಳದಲ್ಲಿ ಸಂಭ್ರಮದ ಕ್ರಿಸ್​ಮಸ್​ ಆಚರಣೆ

Kopala - Raveendra V K

ಕೊಪ್ಪಳ: ಯೇಸುಕ್ರಿಸ್ತ ಅವರ ಬೋಧನೆ ನಮಗೆಲ್ಲ ದಾರಿ ದೀಪ. ಸನ್ಮಾರ್ಗದಲ್ಲಿ ನಡೆಯೋಣ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ನಗರದ ಚರ್ಚ್​ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರಿಸ್​ಮಸ್​ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಯೇಸು ಸಾಮಾನ್ಯ ಹಟ್ಟಿಯಲ್ಲಿ ಹುಟ್ಟಿ ಅಸಾಮಾನ್ಯವಾಗಿ ಬೆಳದರು. ತನ್ನನ್ನೇ ಉರಿಸಿಕೊಂಡು ಜಗತ್ತಿಗೆ ಬೆಳಕು ನೀಡಿದರು. ದೇವ ಮಾನವರಾದರು. ಬೈಬಲ್​ ಕೇವಲ ಕೆಸ್ತರಿಗಷ್ಟೇ ಅಲ್ಲ ಎಲ್ಲರಿಗೂ ಸದ್ಭಾವನಾ ಗ್ರಂಥ. ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿರುವ ಚರ್ಚ್​ ಗಳಿಗೆ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿಪಡಿಸಿದ್ದೇವೆ. ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಚರ್ಚ್​ನಲ್ಲಿ ಸಾಮೂಹಿ ಪ್ರಾರ್ಥನೆ ನೆರವೇರಿಸಲಾಯಿತು. ಪಾಧರ್​ ಜೆ.ರವಿಕುಮಾರ್​, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ವಿನಯ್​ ಅಗಡಿ, ಶ್ಯಾಮ್​ ಸುಂದರ್​ ಇತರರಿದ್ದರು.

ಕೊಪ್ಪಳದ ಪುಲ್​ಗೋಸ್ಪೆಲ್​ ಚರ್ಚ್​ ಆ್​ ಕೆಸ್ತ್​ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಸಾಮೂಹಿಕ ಪ್ರಾರ್ಥನ ನಡೆಯಿತು. ಕೆಸ್ತರು ಬೆಳಗ್ಗೆಯಿಂದ ಚರ್ಚಿಗೆ ಆಗಮಿಸಿ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಪಾಸ್ಟರ್​ ಜೆ. ಪೀಟರ್​ ಜೇಮ್ಸ್​ ಪ್ರಾರ್ಥನೆ ಬೋಧಿಸಿದರು.