ಕೊಪ್ಪಳ ತಾಲೂಕಿನ ಕಿಡದಾಳ ಗ್ರಾಮದ ಶ್ರೀಶಾರದಾ ಇಂರ್ಟನಾಷನಲ್​ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರಕುಶಲ ವಸ್ತು ತಯಾರಿಕೆ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ವಸ್ತುಗಳನ್ನು ವೀಸಿದರು.  
ಜಿಲ್ಲೆ

ಶಾರದಾ ಶಾಲೆಯಲ್ಲಿ ಕರಕುಶಲ ವಸ್ತು ತಯಾರಿಕೆ ಕಾರ್ಯಾಗಾರ

district koppal craft demonstration cum awareness program in sharada school kidadala

ಕೊಪ್ಪಳ: ತಾಲೂಕಿನ ಕಿಡದಾಳ ಶ್ರೀ ಶಾರದಾ ಇಂರ್ಟನಾಷನಲ್​ ಶಾಲೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕರಕುಶಲ ವಸ್ತು ತಯಾರಿಕೆ ಕಾರ್ಯಾಗಾರ ಮತ್ತು ಪ್ರದರ್ಶನ ಜಾಗೃತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಶಾಲೆಯ ಕಾರ್ಯನಿರ್ವಹಣಾ ನಿರ್ದೇಶಕ ಡಾ.ವಿಶ್ವನಾಥ ರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಕರಕುಸಲ ವಸ್ತು ತಯಾರಿಕೆಗೆ ಕಾರ್ಯಾಗಾರ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಜತೆಗೆ ಕರಕುಶಲ ವಸ್ತುಗಳ ಬಳಕೆ ಹೆಚ್ಚಬೇಕು. ಪರಿಸರ ಪೂರಕ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದರು.

ಕೇಂದ್ರ ಕರಕುಶಲ ಅಭಿವೃದ್ಧಿ ಇಲಾಖೆ ಮತ್ತು ಜವಳಿ ಸಚಿವಾಲಯದಿಂದ ಮೂರು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ. ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಬಿದರಿನ ಬುಟ್ಟಿ ಹಾಗೂ ಅಲಂಕಾರಿಕ ವಸ್ತುಗಳು, ಜೊಂಡು ಹುಲ್ಲಿನಿಂದ ಮನೆ ಬಳಕೆ ವಸ್ತುಗಳು, ಬಂಜಾರ ಉಡುಪಿನ ಕೈಕಸೂತಿ ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸಿ ಪ್ರದರ್ಶಿಸಲಾಗುವುದು.

ಪ್ರಾಚಾರ್ಯ ಡಾ.ಪಿ.ಆರ್​.ಎಸ್​. ಚಕ್ರವರ್ತಿ, ಮಂಗಳೂರು ಕರಕುಶಲ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಎಸ್​., ರೀಡ್​ ಕ್ರ್ಟ್​ಾ ಲಕ್ಷಿ$್ಮಶ್ವರದ ಸಹನಾ, ಕರಕುಶಲ ಕೇಂದ್ರ ಸಂಡೂರು, ಕರಕುಶಲ ಕೈಗಾರಿಕಾ ಮೇಳ ಕೊಪ್ಪಳ, ಮುಂತಾದ ನುರಿತ ಕುಶಲಕರ್ಮಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.