ಜಿಲ್ಲೆ

ಕಾರ್ಮಿಕನಿಗೆ ವೈದ್ಯಕಿಯ ವೆಚ್ಚ ನೀಡಲು ಸೂಚನೆ

Kopala - Raveendra V K

ಕೊಪ್ಪಳ: ಕಟ್ಟಡ ಕಾರ್ಮಿಕನಿಗೆ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಕೊಪ್ಪಳ ತಾಲೂಕಿನ ಬಹಾದ್ದೂರಬಂಡಿಯ ಕಾರ್ಮಿಕ ವಿಠ್ಠಲ್​ ಇಟಗಿ ಕಟ್ಟಡ ಕಾರ್ಮಿಕನಾಗಿ ನೋಂದಾಯಿಸಿಕೊಂಡಿದ್ದಾನೆ. ಕೆಲಸ ಮಾಡುವಾಗ ಮೇಲಿನಿಂದ ಬಿದ್ದು ಗಾಯಗೊಂಡಿದ್ದಾನೆ. ತೀವ್ರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಒಂದು ಲಕ್ಷ ರೂ. ವೆಚ್ಚವಾಗಿದೆ. ಚಿಕಿತ್ಸಾ ವೆಚ್ಚ ಪಾವತಿಸುವಂತೆ ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾನೆ. ಅರ್ಹತೆ ಇದ್ದರೂ ಇಲಾಖೆ ಚಿಕಿತಸಾ ವೆಚ್ಚ ಪಾವತಿಸಿಲ್ಲ. ಸೇವಾ ನೂನ್ಯತೆ ಎಸಗಿದೆ. ಈ ಬಗ್ಗೆ ಬೇಸತ್ತ ವಿಠ್ಠಲ್​ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಜಿಲ್ಲಾಧ್ಯೆ ಜೆ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯ ರಾಜು ಎನ್​.ಮೇತ್ರಿ ವಿಠ್ಠಲ್​ಗೆ 63,002ರೂ. ಪರಿಹಾರ ಮೊತ್ತ ಪಾವತಿಗೆ ಆದೇಶಿಸಿದ್ದಾರೆ. ಮಾನಸಿಕ ಹಿಂಸೆಗೆ 10 ಸಾವಿರ ರೂ. ಹಾಗೂ ಪ್ರಕರಣದ ವೆಚ್ಚ 5 ಸಾವಿರ ರೂ.ಗಳನ್ನು 45 ದಿನಗಳೊಳಗೆ ಪಾವತಿಸಲು ಸೂಚಿಸಿದ್ದಾರೆ. ವಿಠ್ಠಲ್​ ಪರ ವಕೀಲ ಎಂ.ವಿ.ಮುದಗಲ್​ ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ.