ಜಿಲ್ಲೆ

ಮದುವೆ ಫೋಟೋ-ವಿಡಿಯೋ ಸಕಾಲಕ್ಕೆ ನೀಡದ್ದಕ್ಕೆ ದಂಡ

ಕೊಪ್ಪಳ: ವಿವಾಹ ಸಮಾರಂಭದ ಫೋಟೋ-ವಿಡಿಯೋ ಸಕಾಲಕ್ಕೆ ನೀಡಿದ ಫೋಟೋ ಗ್ರಾರ್​ಗಳಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಕೊಪ್ಪಳದ ಲೇಖನಾ ಹಾಗೂ ಅರ್ಪಣ್​ ಜೋಡಿ 2022ರಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್​ನಲ್ಲಿನ ವೆಡ್​ಹುಡ್ಸ್​ ವೂವ್​ಲೆಕ್ಸ್​ ಆಫೀಸ್​ನ ರೋಷನ್​ ಕ್ರಿಸ್ಟೋಪರ್​ ಮತ್ತು ಇಮ್ಯಾನುಲ್​ಗೆ ವಿವಾಹ ಪೂರ್ವ ಮತ್ತು ಮದುವೆ ಸಮಾರಂಭದ ಫೋಟೋ ತೆಗೆದುಕೊಡುವಂತೆ ವ್ಯವಹರಿಸಿದ್ದಾರೆ. 1.20ಲಕ್ಷ ರೂ.ಗೆ ವ್ಯವಹಾರ ಮುಗಿಸಿದ್ದು, ಹಂತ ಹಂತವಾಗಿ ಫೋನ್​ ಪೇ ಮೂಲಕ 1 ಲಕ್ಷ ರೂ. ಸಂದಾಯ ಮಾಡಿದ್ದಾರೆ.

ಫೋಟೋಗ್ರಾರ್ಸ್​ ಒಪ್ಪಂದದಂತೆ ಸಕಲೇಶಪುರ, ಚಿಕ್ಕಮಗಳೂರು ಭಾಗದಲ್ಲಿ ವಿವಾಹ ಪೂರ್ವ ಫೋಟೋ, ವಿಡಿಯೋ ಮಾಡಿಕೊಟ್ಟಿಲ್ಲ. ವಿವಾಹ ಸಮಯದಲ್ಲೂ ಸರಿಯಾಗಿ ಫೋಟೋ, ವಿಡಿಯೋ ಮಾಡಿಕೊಡದೆ ಸೇವಾ ನೂನ್ಯತೆ ಎಸಗಿದ್ದಾರೆ. ಇದನ್ನು ಪ್ರಶ್ನಿಸಿ ದಂಪತಿ ಗ್ರಾಹಕರ ಆಯೋಗಕ್ಕೆ ದೂರು ದಾಖಲಿಸಿದ್ದಾರೆ.

ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯೆ ಜಿ.ಇ. ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯ ರಾಜು ಎನ್​. ಮೇತ್ರಿ ವಾದ-ಪ್ರತಿವಾದ, ದಾಖಲೆ ಪರಿಶೀಲಿಸಿದಾಗ ಸೇವಾ ನೂನ್ಯತೆ ಎಸಗಿರುವುದು ಕಂಡುಬಂದಿದೆ. ಹೀಗಾಗಿ ದೂರುದಾರರಿಗೆ ದೂರಿನ ದಿನಾಂಕದಿಂದ ಶೇ.6ರ ಬಡ್ಡಿದರದಂತೆ 25 ಸಾವಿರ ರೂ. ಪರಿಹಾರ ಹಾಗೂ ದೂರಿನ ಖರ್ಚು 5 ಸಾವಿರ ರೂ.ಗಳನ್ನು 45 ದಿನದಲ್ಲಿ ಪಾವತಿಸಲು ಆದೇಶಿಸಿದೆ.