ಕೊಪ್ಪಳ: ಸದ್ಯ ಎಲ್ಲ ಸೇವೆಗಳು ಗಣಕೀಕೃತವಾಗಿವೆ. ಗ್ರಾಪಂ ಹಂತದಲ್ಲಿ ಕಂಪ್ಯೂಟರ್ ಆಪರೇಟರ್ಗಳು ಸಾಕಷ್ಟು ಶ್ರಮವಹಿಸಿ ದುಡಿಯುತ್ತಿದ್ದು, ಅವರ ಕಾರ್ಯ ಶ್ಲಾಘನೀಯ ಎಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ಹೇಳಿದರು.
ನಗರದ ತಾಪಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಂಪ್ಯೂಟರ್ ಆಪರೇಟರ್ಗಳ ದಿನಾಚರಣೆಯಲ್ಲಿ ಮಾತನಾಡಿದರು.
ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಪಿತಾಮಹ. ಅವರ ಜನ್ಮ ದಿನವನ್ನು ಕಂಪ್ಯೂಟರ್ ಆಪರೇಟರ್ಗಳ ದಿನವಾಗಿ ಆಚರಿಸಲಾಗುತ್ತಿದೆ. ಎಲ್ಲ ಕೆಲಸಗಳು ಬಹುಪಾಲು ಕಂಪ್ಯೂಟರ್ ಅವಲಂಬಿಸಿವೆ. ಕ್ಷಣಾರ್ಧದಲ್ಲಿ ನಮಗೆ ಜಗತ್ತಿನ ಮಾಹಿತಿ ದೊರೆಯುತ್ತಿದೆ. ಗ್ರಾಪಂನ ಎಲ್ಲ ಸೇವೆಗಳು ಆನ್ಲೈನ್ ಆಗಿವೆ. ಅವುಗಳನ್ನು ಆಪರೇಟರ್ಗಳು ನಿರ್ವಹಿಸುತ್ತಿದ್ದಾರೆ. ಸಕಾಲದಲ್ಲಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಮೊದಲು ಬರವಣಿಗೆ ರೂಪದಲ್ಲಿ ದಾಖಲೆಗಳಿರುತ್ತಿದ್ದವು. ನರೇಗಾ ಯೋಜನೆ ಬಂದಾಗಿನಿಂದ ಎಲ್ಲವೂ ಆನ್ಲೈನ್ ಆಗಿವೆ. ಜನರಿಗೆ ನಿಮ್ಮ ಸೇವೆ ಅತ್ಯವಶ್ಯವಿದ್ದು, ಉತ್ತಮವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಚಾರ್ಲ್ಸ್ ಬ್ಯಾಬೇಜ್ ಸಂಶೋಧನೆ ಇಂದು ಜಗತ್ತಿಗೆ ಉಪಯೋಗವಾಗುತ್ತಿದೆ. ಗಣಕಯಂತ್ರ ನಿರ್ವಾಹಕರು ಉತ್ತಮವಾಗಿ ಕೆಲಸ ಮಾಡುವುದರಿಂದ ಯೋಜನೆಗಳ ಪ್ರಗತಿ ಸಾಗುತ್ತಿದೆ. ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಕೆಲಸ ನಿರ್ವಹಿಸಿದಲ್ಲಿ ಇನ್ನಷ್ಟು ಪ್ರಗತಿ ಕಾಣಬಹುದು ಎಂದರು.
ಚಾರ್ಲ್ಸ್ ಬ್ಯಾಬೇಜ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಕೇಕ್ ಕತ್ತರಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ಯಂಕಪ್ಪ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಎಚ್., ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಂಪ್ಯೂಟರ್ ಆಪರೇಟರ್ಗಳಾದ ನಿಸಾರ ಅಹಮದ್, ಮಾರುತಿ ಹಣವಾಳ ಇತರರಿದ್ದರು.