ಕೊಪ್ಪಳ: ಸಾರ್ವಜನಿಕರು ತಮ್ಮ ಆಸ್ತಿಗೆ ಎ, ಬಿ ಖಾತಾ ಸುಲಭವಾಗಿ ಪಡೆಯಬಹುದು ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ 3ನೇ ವಾರ್ಡ್ನಲ್ಲಿ ಗುರುವಾರ ನಗರಸಭೆಯಿಂದ ಹಮ್ಮಿಕೊಂಡಿದ್ದ ಇ ಆಸ್ತಿ ದಾಖಲೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ವರ್ಷಗಳಿಂದ ಆಸ್ತಿಗೆ ನಮೂನೆ 3, ಎ, ಬಿ ಖಾತಾ ಪಡೆಯುವಲ್ಲಿ ಸಮಸ್ಯೆ ಇತ್ತು. ಸರ್ಕಾರ ಅದನ್ನು ಪರಿಹರಿಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮನೆ ಮನೆಗೆ ಆಸ್ತಿ ದಾಖಲೆ ನೀಡುವ ಅಭಿಯಾನ ಹಮ್ಮಿಕೊಂಡಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಮೂರು ತಿಂಗಳೊಳಗೆ ಎಲ್ಲ ವಾರ್ಡ್ಗಳಲ್ಲಿ ಜನರಿಗೆ ಇ ಆಸ್ತಿ ದಾಖಲೆ ನೀಡಲಾಗುವುದು. ಆಸ್ತಿ ದಾಖಲೆ ಇದ್ದಲ್ಲಿ ಸುಲಭವಾಗಿ ಮಾರಾಟ, ಸಾಲ, ಸಹಾಯಧನ ಇನ್ನಿತರ ಸೌಲಭ್ಯ ಪಡೆಯಲು ಸಹಾಯವಾಗಲಿದೆ. ನಗರಸಭೆ ವ್ಯಾಪ್ತಿಯ ಎಂಟು ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ದಾಖಲೆ ಸಿಗಲಿದೆ. ಎಲ್ಲರೂ ಅಗತ್ಯ ದಾಖಲೆ ನೀಡಿ ಇ&ಆಸ್ತಿ ದಾಖಲೆ ಪಡೆಯುವಂತೆ ಮನವಿ ಮಾಡಿದರು.
ನಗರಸಭೆ ಉಪಾಧ್ಯೆ ಅಶ್ವಿನಿ ಗದುಗಿನಮಠ, ಪೌರಾಯುಕ್ತ ಗಣಪತಿ ಪಾಟೀಲ್, ಪ್ರಮುಖರಾದ ಖಾಜಾಹುಸೇನ್ರೆವಡಿ, ಸಲೀಂ ಅಳವಂಡಿ, ಹಜರತ್ ಮುಜಾವರ್ಇತರರಿದ್ದರು.