ಕೊಪ್ಪಳ: ಮಳೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ನೀರು ಸಂಗ್ರಹವಾಗಿ ಜನರಿಗೆ ತೊಂದರೆಯಾಗಿದೆ. ನಗರಸಭೆ ಅಧಿಕಾರಿಗಳು ಕಳೆದರೆಡು ದಿನದಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ರೈಲ್ವೆ ನಿಲ್ದಾಣ ಕಾಮಗಾರಿ ಕಾರಣ ಚರಂಡಿ ಮುಚ್ಚಿ ಹೋಗಿದ್ದು, ಮಳೆ ನೀರು ಸಂಗ್ರಹವಾಗಿ ಜನರ ಓಡಾಟಕ್ಕೆ ಅಡಚಣೆ ಆಗಿದೆ. ಕುವೆಂಪು ನಗರದಲ್ಲಿ ಗುಡ್ಡದ ನೀರು ಹರಿದು ಮನೆಗಳಿಗೆ ನೀರು ನುಗ್ಗಿದೆ. ಸಕ್ಕಿಂಗ್ ಮಷೀನ್ಗಳನ್ನು ಬಳಸಿ ಅಲ್ಲಲ್ಲಿ ಸಂಗ್ರಹಗೊಂಡ ನೀರು ತೆರವು ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಯಿತು. ಕಲ್ಯಾಣ ನಗರ, ಗಣೇಶ ನಗರದಲ್ಲಿ ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.
ಹಾನಿಗೊಳಗಾಗದ ವಾರ್ಡ್ಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಜನರಿಗೆ ಯಾವ ತೊಂದರೆಗಳಾಗುತ್ತಿವೆ ಎಂದು ಪಟ್ಟಿ ಮಾಡಿಕೊಂಡು ಪರಿಹಾರ ಕಲ್ಪಿಸಲಾಗುತ್ತಿದೆ. ಮನೆ ಬಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ವರದಿ ನೀಡಲು ಮೇಲಧಿಕಾರಿಗಳು ಸೂಚಿಸಿದ್ದಾರೆ. ಹಾನಿಗೆ ಒಳಗಾದ ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ನಿವಾಸಿಗಳಿಂದ ಮಾಹಿತಿ ಪಡೆದು ವರದಿ ಸಿದ್ಧಪಡಿಸಿದರು.
ಮಳೆಯಿಂದ ಅನಾಹುತಗಳಾಗದಂತೆ ಮುಂಜಾಗ್ರತೆವಹಿಸಲಾಗಿದೆ. ಸಿಬ್ಬಂದಿ ನಿಯೋಜಿದಿ ಹಾನಿ ಪ್ರದೇಶದ ಸಮಸ್ಯೆ ಪರಿಹರಿಸಲಾಗುತ್ತಿದೆ. ಜೆಸಿಬಿ, ಸಕ್ಕಿಂಗ್ ಮಷೀನ್ ಬಳಸಿ ನೀರು ತೆರವು ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಗಣಪತಿ ಪಾಟೀಲ್. ನಗರಸಭೆ ಪೌರಾಯುಕ್ತ ಕೊಪ್ಪಳ.ಗಣಪತಿ ಪಾಟೀಲ್. ನಗರಸಭೆ ಪೌರಾಯುಕ್ತ ಕೊಪ್ಪಳ.