ಜಿಲ್ಲೆ

ಕೊಪ್ಪಳ ನಗರಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆ

Kopala - Raveendra V K

ಕೊಪ್ಪಳ: ನಗರಸಭೆ 8 ಮತ್ತು 11ನೇ ವಾರ್ಡ್​ ಉಪ ಚುನಾವಣೆ ರಂಗೇರುತ್ತಿದೆ. ಬಾಕಿ ಅವಧಿ ಕಡಿಮೆ ಇರುವ ಕಾರಣ ಆಕಾಂಗಳಲ್ಲಿ ಅಷ್ಟೊಂದು ಪೈಪೋಟಿ ಕಾಣಿಸುತ್ತಿಲ್ಲ. ಸೋವಾರ ಎರಡೂ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳಿಂದ ತಲಾ ಒಬ್ಬೊಬ್ಬ ಅಭ್ಯರ್ಥಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದರು.

8ನೇ ವಾರ್ಡ್​ಗೆ ಬಿಜೆಪಿಯಿಂದ ಕವಿತಾ ಬಸವರಾಜ ಗಾಳಿ, ಕಾಂಗ್ರೆಸ್​ನಿಂದ ರೇಣುಕಾ ಕಲ್ಲಾಕ್ಷಪ್ಪ ಪೂಜಾರ, 11ನೇ ವಾರ್ಡ್​ಗೆ ಬಿಜೆಪಿಯಿಂದ ಚನ್ನಬಸಪ್ಪ ಗವಿಸಿದ್ದಪ್ಪ ಗಾಳಿ, ಕಾಂಗ್ರೆಸ್​ನಿಂದ ರಾಜಶೇಖರ ಆಡೂರು ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿಗೆ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳು ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹಾಗೂ ಇತರ ನಾಯಕರೊಡನೆ ಆಗಮಿಸಿ ಬಲ ಪ್ರದರ್ಶಿಸಿದರು.

ಕೈ ಅಭ್ಯರ್ಥಿಗಳು ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ನಗರ ಬ್ಲಾಕ್​ ಅಧ್ಯಕ್ಷ ಎಂ.ಕಾಟನ್​ ಪಾಷಾ, ಪ್ರಮುಖರಾದ ಕೆ.ಎಂ.ಸೈಯ್ಯದ್​, ಮಾನ್ವಿ ಪಾಷಾ, ಸಿದ್ದು ಮ್ಯಾಗೇರಿ ಸೇರಿ ಇತರ ನಾಯಕರೊಡಗೂಡಿ ಆಗಮಿಸಿದರು. ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಎರಡು ವಾರ್ಡ್​ಗೆ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಬ್ಬರ ನಡುವೆ ಚುನಾವಣೆ ನಡೆಯಲಿದೆ.

ನಗರಸಭೆ 31 ಸದಸ್ಯ ಬಲ ಹೊಂದಿದ್ದು, ವಿವಿಧ ಕಾರಣಗಳಿಗೆ ಎರಡು ಸ್ಥಾನಗಳು ಖಾಲಿಯಾಗಿವೆ. ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ನ.14 ಉಮೇದುವಾರಿಕೆ ಹಿಂಪಡೆಯಲು ಕೊನೇ ದಿನವಾಗಿದೆ. ನ.23ರಂದು ಮತದಾನ ನಡೆಯಲಿದೆ.