ಜಿಲ್ಲೆ

ಬಾಲ್ಯ ವಿವಾಹದಿಂದ ಮೂವರು ಬಾಲಕಿಯರ ರಕ್ಷಣೆ

Kopala - Raveendra V K

ಕೊಪ್ಪಳ: ತಾಲೂಕಿನ ಅರಸನಕೇರಿ ಮತ್ತು ಅರಸನೇರಿ ತಾಂಡಾದಲ್ಲಿ ಬಾಲ್ಯವಿವಾಹ ಮಾಡಲು ಉದ್ದೇಶಿಸಿದ್ದ ಮೂವರು ಬಾಲಕಿಯನ್ನು ಮಕ್ಕಳ ರಕ್ಷಣ ಟಕ ಅಧಿಕಾರಿಗಳು ಪಾಲಕರಿಗೆ ತಿಳಿವಳಿಕೆ ನೀಡಿದ್ದಾರೆ.

ಅರಸನೇರಿ ಗ್ರಾಮದಲ್ಲಿ ಒಂದು ಮತ್ತು ತಾಂಡಾದಲ್ಲಿ ಐವರು ಮಕ್ಕಳಿಗೆ ಮದುವೆ ಮಾಡಲು ತಯಾರಿ ನಡೆಸಲಾಗಿದೆ. ನಿಶ್ಚಿತಾರ್ಥ ನಡೆದ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ಕರೆ ಬಂದಿದೆ. ಮಕ್ಕಳ ರಕ್ಷಣಾ ಟಕ ಅಧಿಕಾರಿಗಳು ವನಬಳ್ಳಾರಿ ಗ್ರಾಪಂ ಕಾರ್ಯದರ್ಶಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಮೂವರು ಬಾಲಕಿಯರನ್ನು ವಶಕ್ಕೆ ಪಡೆಯಲಾಯಿತು. ಬಾಕಿ ಮೂರು ಬಾಲಕಿಯರ ಕುಟುಂಬ ಸೇರಿ ಆರು ಕುಟುಂಬದವರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಮಕ್ಕಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗಲು ಸೂಚಿಸಲಾಗಿದೆ.

ಬಾಲಕಿಯರ ಕುಟುಂಬದವರು ಹಾಗೂ ಗ್ರಾಮಸ್ಥರಿಗೆ ಬಾಲ್ಯ ವಿವಾಹ ಶಿಾರ್ಹ ಅಪರಾಧ. ಮಗುವಿನ ಭವಿಷ್ಯ ಹಾಳಾಗಲಿದೆ. ಕಠಿಣ ಶಿೆ ವಿಧಿಸಲಾಗುವುದೆಂದು ತಿಳಿಸಿದರು. ಬಾಲ್ಯ ವಿವಾಹ ದುಷ್ಪರಿಣಾಮಗಳನ್ನು ತಿಳಿಸಿದರು. ಮಕ್ಕಳ ರಕ್ಷಣಾ ಟಕದ ಕಾನೂನು ಸಲಹೆಗಾರ್ತಿ ಶಿವಲೀಲಾ ಹೊನ್ನುರು, ಮಕ್ಕಳ ಸಹಾಯವಾಣಿ ನೌಕರ ರಾಘವೇಂದ್ರ, ಲತಾ, ಶಂಕರ ಸುರಳ್​, ಕೃಷ್ಣಾ ಇತರರಿದ್ದರು.