ಜಿಲ್ಲೆ

ಬಾಲ್ಯ ವಿವಾಹದಿಂದ ಮಕ್ಕಳ ಬದುಕು ದುಸ್ತರ

Kopala - Raveendra V K

ಕೊಪ್ಪಳ: ಬಾಲ್ಯ ವಿವಾಹದಿಂದ ಮಕ್ಕಳ ಬದಕು ಹಾಳಾಗುತ್ತದೆ. ಹಲವು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ಹೇಳಿದರು.

ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಗುವಿಗೆ 18 ವರ್ಷ ವಯಸ್ಸಾಗುವವರೆಗೆ ಮದುವೆ ಮಾಡಬಾರದು. ಇದರಿಂದ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆಟ ಆಡುವ ವಯಸ್ಸಲ್ಲಿ ಜವಾಬ್ದಾರಿ ಹೇರಬಾರದು. ತಿಳಿವಳಿಕೆ ಇಲ್ಲದೇ ಪಾಲಕರು ಬಾಲ್ಯವಿವಾಹ ಮಾಡುತ್ತಾರೆ. ಈ ಭಾಗದಲ್ಲಿ ಈ ಪದ್ಧತಿ ಹೆಚ್ಚಿದೆ. ಇದು ಕಾನೂನು ಬಾಹಿರ ಕೃತ್ಯ. ವಿವಾಹ ಮಾಡುವುದು, ಭಾಗಿಯಾಗುವುದು ಶಿಾರ್ಹ ಅಪರಾಧ. ಒಂದು ಲಕ್ಷ ರೂ. ವರಗೆ ದಂಡ ಹಾಗೂ ಜೈಲು ಶಿೆ ವಿಧಿಸಲಾಗುವುದು ಎಂದು ತಿಳಿಸಿದರು.

ಪ್ರಾಚಾಯೆರ್ ಕುಸುಮ ಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಪೂಜಾರ, ಟಕದ ಪ್ರತಿಭಾ, ರವಿ, ಶಿಕ್ಷಕಿ ಶೈಲಾ ಇತರರಿದ್ದರು.