ಕೊಪ್ಪಳ: ಅಪ್ರಾಪ್ತಳಿಗೆ ಬಾಲ್ಯವಿವಾಹ ಮಾಡಲು ಯತ್ನಿಸಿದ್ದಕ್ಕೆ ಬಾಲಕಿ ತಾಯಿ, ವರ, ಸುಳ್ಳು ದಾಖಲೆ ನೀಡಿದ ಶಾಲಾ ಮುಖ್ಯ ಶಿಕ್ಷಕ ಸೇರಿ ಐವರಿಗೆ ವಿವಿಧ ಸೆಕ್ಷನ್ಗಳಡಿ ತಲಾ 2 ವರ್ಷಗಳ ಜೈಲು ಶಿಕ್ಷೆ 24 ಸಾವಿರ ರೂ. ದಂಡ ವಿಧಿಸಿ ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಸೆ.22ರಂದು ಮಹತ್ವದ ತೀರ್ಪು ನೀಡಿದೆ.
ಮುಖ್ಯ ಶಿಕ್ಷಕ ಮಕ್ಬಲ್ ಖಾದ್ರಿ, ಬಾಲಕಿ ತಾಯಿ ಕುಸುಂಬಿ, ವರ ಖಾಜಾ ಪಾಷಾ, ಸೈಯದ್ ಮೈನುದ್ದೀನ್ ಖಾದ್ರಿ, ಖಾತುಬೀ ಶಿೆಗೆ ಗುರಿಯಾದವರು.
ಗಂಗಾವತಿ ನಗರ ಠಾಣೆ ವ್ಯಾಪ್ತಿಯಲ್ಲಿ 2017ರ ಏಪ್ರೀಲ್ 2ರಂದು ಅಪ್ರಾಪ್ತಳಿಗೆ ಬಾಲ್ಯ ವಿವಾಹ ಮಾಡಲು ಯತ್ನಿಸಲಾಗಿದೆ. ಗಂಗಾವತಿ ಲಕ್ಷಿ$್ಮ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಕ್ಬಲ್ ಖಾದ್ರಿ ಬಾಲಕಿಗೆ 18 ವರ್ಷ ವಯಸ್ಸಾಗಿದೆ ಎಂದು ನಕಲಿ ದಾಖಲೆ ನೀಡಿದ್ದರು. ಅಪರಾಧಿಗಳೆಲ್ಲರೂ ಸೇರಿ ಬಾಲ್ಯವಿವಾಹ ನೆರವೇರಿಸಲು ಮುಂದಾಗಿದ್ದರು. ಈ ಸಂಬಂಧ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖಾಧಿಕಾರಿ ಗುಲಾಮ್ ಅಹ್ಮದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ನಾಗೇಶ ಪಾಟೀಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರನ್ನು ಅಪರಾಧಿಗಳೆಂದು ನಿರ್ಧರಿಸಿದ್ದಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 10ರಡಿ 2 ವರ್ಷ ಜೈಲು ಶಿೆ, ತಲಾ 10 ಸಾವಿರ ರೂ. ದಂಡ, ಕಲಂ 11ರಡಿ 2 ವರ್ಷ ಸೆರೆವಾಸ ಮತ್ತು ತಲಾ 10 ಸಾವಿರ ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 465ರಡಿ 6 ತಿಂಗಳು ಕಾರಾಗೃಹ ವಾಸ ಹಾಗೂ ತಲಾ 2ಸಾವಿರ ರೂ. ದಂಡ ಮತ್ತು ಕಲಂ 471ರಡಿ 6 ತಿಂಗಳು ಜೈಲು ಮತ್ತು ತಲಾ 2 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನ ಸ್ವಾಮಿ ಹಿರೇಮಠ ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಎಚ್.ಸಿ.ಶುಭಾಷ್, ಯಮನೂರಪ್ಪ, ಭೀಮಣ್ಣ, ಯಲ್ಲರೆಡ್ಡಿ ಸಾಗಳನ್ನು ಹಾಜರುಪಡಿಸಿ ಸಹಕರಿಸಿದ್ದಾರೆಂದು ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.