ಜಿಲ್ಲೆ

ನಾಲ್ವರ ವಿರುದ್ಧ ಪ್ರಕರಣ ದಾಖಲು

Kopala - Raveendra V K

ಕೊಪ್ಪಳ: ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ಬಾಲ್ಯವಿವಾಹ ನಡೆದಿದ್ದು ನಾಲ್ವರ ವಿರುದ್ಧ ಕನಕಗಿರಿ ಠಾಣೆಯಲ್ಲಿ ಭಾನುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಹನುಮೇಶ ಗದ್ದಿ, ಶರಣಮ್ಮ ಗದ್ದಿ, ಶರಣಪ್ಪ ನಾರಾಯಣಪುರ, ಜಯಶ್ರೀ ನಾರಾಯಣಪುರ ಆರೋಪಿಗಳು. 16 ವರ್ಷದ ಬಾಲಕಿಗೆ ಹನುಮೇಶನದೊಂದಿಗೆ ಬಾಲ್ಯವಿವಾಹ ಮಾಡಿದ್ದಾರೆ. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿದ್ದು, ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಬಾಲಕಿಯನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ. ತನಿಖೆ ವೇಳೆ ಬಾಲ್ಯವಿವಾಹ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶೈಲಾ ಸಾಲಿಮಠ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.