ಜಿಲ್ಲೆ

ಬಾಲ ಕಾರ್ಮಿಕರ ರಕ್ಷಣೆ

Kopala - Raveendra V K

ಕೊಪ್ಪಳ: ತಹಸೀಲ್ದಾರ್​ ವಿಠ್ಠಲ ಚೌಗಲಾ ನೇತೃತ್ವದ ಬಾಲ ಕಾರ್ಮಿಕ ರಕ್ಷಣಾ ಸಮಿತಿ ಬುಧವಾರ ವಿವಿಧೆಡೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಸಿತು.

ದಾಳಿಗೂ ಮುನ್ನ ಸಭೆ ನಡೆಸಿ ಮಾತನಾಡಿದ ತಹಸೀಲ್ದಾರ್​, ಎಲ್ಲ ಅಧಿಕಾರಿಗಳು ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಕಂಡುಬಂದ ಬಾಲ ಕಾರ್ಮಿಕ, ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿ. ಕೆಲಸದಿಂದ ಮುಕ್ತಿ ಕೊಡಿಸಿ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ. ಶಾಲೆಯಿಂದ ಹೊರಗುಳಿದ 33 ಮಕ್ಕಳನ್ನು ಮತ್ತೆ ಶಾಲೆ ಸೇರಿಸಿ. ಮಕ್ಕಳ ಬಗೆಗಿನ ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಟಕಕ್ಕೆ ಒದಗಿಸುವಂತೆ ಸೂಚಿಸಿದರು.

ಬಳಿಕ ನಗರದ ವಿವಿಧ ಹೋಟೆಲ್​, ಗ್ಯಾರೇಜ್​, ಬೇಕರಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ದಿಢೀರ್​ ದಾಳಿ ನಡೆಸಲಾಯಿತು. ಗ್ರಾಮೀಣ ಭಾಗದಲ್ಲಿ ಕೆ.ಪಿ.ಆರ್​ ಅಗ್ರೋ ಕೆಮಿಕಲ್​ ಲಿಮಿಟೆಡ್​ ಫ್ಯಾಕ್ಟರಿ, ಇಟ್ಟಂಗಿ ಭಟ್ಟಿ, ಕೋಳಿ ಫಾರಂ ಸೆರಿದಂತೆ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ಕೈಗೊಳ್ಳಲಾಯಿತು. ಬೆಂಗಳೂರು ಬೇಕರಿಯಲ್ಲಿ ಇಬ್ಬರು, ಅಕ್ಬರ್​ ಆಟೋ ವರ್ಕ್ಸ್​, ಬಸವೇಶ್ವರ ಕಿರಾಣಿ ಸ್ಟೋರ್​, ಆಸ್​ೀ ವರ್ಕ್​ಶಾಪ್​ನಲ್ಲಿ ತಲಾ ಓರ್ವ ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಪತ್ತೆಯಾಯಿತು. ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. ಮಾಲೀಕರ ವಿರುದ್ಧ ದಾವೆ ಹೂಡುವುದಾಗಿ ಅಧಿಕಾರಿಗಳು ತಿಳಿಸಿದರು.