ಜಿಲ್ಲೆ

ಚಾರಣ ಕಾರ್ಯಕ್ರಮ 20ಕ್ಕೆ

ಕೊಪ್ಪಳ: ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಚಾರಣ ಬಳಗದಿಂದ ಅಶೋಕ ಶಿಲಾಶಾಸನ ಮತ್ತು ಕೊಪ್ಪಳ ಕೋಟೆ ಚಾರಣ ಸಾಹಸ ಕಾರ್ಯಕ್ರಮ ಏ.20 ರಂದು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಯುವಕರು, ಉತ್ಸಾಹಿಗಳು ಹಾಗೂ ಎಲ್ಲಾ ವಯೋಮಾನದವರು ಹೆಸರು ನೋಂದಾಯಿಸಿ ಭಾಗಿಯಾಗಬಹುದು.

50ರೂ. ಪ್ರವೇಶ ಶುಲ್ಕ, ಏ.20ರ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಚಾರಣ ನಡೆಯಲಿದೆ. ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಲಿದೆ. 10 ವರ್ಷದೊಳಗಿನ ಮಕ್ಕಳಿದ್ದರೆ ಕಡ್ಡಾಯವಾಗಿ ಪಾಲಕರು ಜತೆಗಿರಬೇಕು. ಕುಡಿವ ನೀರು, ಕರವಸ್ತ್ರ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಭಾಗವಹಿಸುವವರೇ ತರಬೇಕು. ಸೂಕ್ತ ಬಟ್ಟೆ ಧರಿಸಬೇಕು. ಭಾಗವಹಿಸುವವರಿಗೆ ಉಚಿತ ೋಟೋ ಮತ್ತು ವಿಡಿಯೋ (ಸಾಪ್ಟ್​ ಕಾಫಿ) ನೀಡಲಾಗುವುದು. ಉಪಾಹಾರ ವ್ಯವಸ್ಥೆ ಇರಲಿದೆ.

ಜಿಲ್ಲಾ ಕ್ರೀಡಾಂಗಣದಿಂದ ಶಿಲ್ಪಾಗ್ರಾ$ಂಡ್​ ಹೋಟೆಲ್​ ಹಿಂಭಾಗ, ಅಶೋಕ ಶಿಲಾಶಾಸನ ಗುಡ್ಡದ ದಾರಿ ಮಾರ್ಗವಾಗಿ ಮರ್ದಾನಲಿ ದರ್ಗಾ ತಲುಪಲಿದೆ. ಬಳಿಕ ಉಪಾಹಾರ ಇರಲಿದ್ದು, ವಾಪಸ್​ ಅದೇ ಮಾರ್ಗದಲ್ಲಿ ಬರಬೇಕು. ಮಾಹಿತಿಗೆ ತುಕಾರಾಮ್​ ಮೊ.ಸಂ: 8197398600, ವಿಶ್ವನಾಥ ಮೊ.ಸಂ: 8660455969 ಹಾಗೂ ಕಛೇರಿ ದೂ.ಸಂ: 08539&-230121 ಮತ್ತು ಡಾ. ಸಿದ್ಲಿಂಗಪ್ಪ ಕೊಟ್ನೆಕಲ್​ ಮೊ.ಸಂ: 9448570340 ಡಾ.ವಿಜಯಕುಮಾರ ಸುಂಕದ ಮೊ.ಸಂ: 9980661571 ಸಂಪರ್ಕಿಸುವಂತೆ ಕ್ರೀಡಾಧಿಕಾರಿ ವಿಠ್ಠಲ್​ ಜಾಬಗೌಡರ ತಿಳಿಸಿದ್ದಾರೆ.