ಕೊಪ್ಪಳದಲ್ಲಿ ಸಾಧಕ ರಂಗಕರ್ಮಿಗಳಿಗೆ ಗುರುವಾರ ಸಿಜಿಕೆ ರಂಗ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಟಕ ಅಕಾಡೆಮಿ ಸದಸ್ಯ ಚಾಂದಪಾಷಾ ಕಿಲ್ಲೇದಾರ್​, ಅತಿಥಿಗಳಾದ ಆಶಾಲತಾ, ಶೈಲಜಾ ಹಿರೇಮಠ, ರಾಜ್ಯ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಮೊಹಮ್ಮದ್​ ಗೌಸ್​ ಮುಲ್ಲಾ,ಪ್ರಾಚಾರ್ಯ ಗಣಪತಿ ಲಮಾಣಿ, ಎಂ.ಕಾಟನ್​ ಪಾಷಾ ಇದ್ದರು. 
ಜಿಲ್ಲೆ

ರಂಗಭೂಮಿ ಉಳಿಸುವ ಕೆಲಸವಾಗಲಿ

ಕೊಪ್ಪಳ: ನಟರ ನಿಜವಾದ ಚಿತ್ರಣ ರಂಗಭುಮಿ ಕಟ್ಟಿಕೊಡುತ್ತದೆ. ಮೊಬೈಲ್​, ಟಿವಿಗಳ ಹಾವಳಿಯಲ್ಲಿ ರಂಗಭೂಮಿ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಅದನ್ನು ಉಳಿಸಿ ಬೆಳೆಸಬೇಕಿದೆ ಎಂದು ನಾಟಕ ಅಕಾಡೆಮಿ ಸದಸ್ಯ ಚಾಂದಪಾಷಾ ಕಿಲ್ಲೇದಾರ್​ ಹೇಳಿದರು.

ಬೀದಿ ನಾಟಕ ಅಕಾಡೆಮಿ, ಕನ್ನಡ ನೆಟ್​ ಡಾಟ್​ ಕಾಮ್​, ಕವಿಸಮಯ ಹಾಗೂ ಬಹುತ್ವ ಬಳಗದಿಂದ ಗುರುವಾರ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ರಂಗ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಕಲೆ ಉಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ರಂಗಕರ್ಮಿ ಸಿಜಿಕೆ ಜನ್ಮದಿನ ಅಂಗವಾಗಿ ಪ್ರತಿಭಾವಂತ ರಂಗ ಕರ್ಮಿಗಳು, ನಟ, ನಿರ್ದೇಶಕರಾದ ಶೀಲಾ ಹಾಲ್ಕುರಿಕೆ (2021), ಶರಣು ಶೆಟ್ಟರ್​ (2022), ಲಕ್ಷ$್ಮಣ ಪಿರಗಾರ (2023) ಅವರಿಗೆ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತಿಥಿಗಳಾದ ಆಶಾಲತಾ, ಶೈಲಜಾ ಹಿರೇಮಠ, ರಾಜ್ಯ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಮೊಹಮ್ಮದ್​ ಗೌಸ್​ ಮುಲ್ಲಾ ಮಾತನಾಡಿದರು. ಪ್ರಾಚಾರ್ಯ ಗಣಪತಿ ಲಮಾಣಿ, ಎಂ.ಕಾಟನ್​ ಪಾಷಾ, ಡಾ.ನರಸಿಂಹ ಗುಂಜಳ್ಳಿ, ರಾಜು ಬಿ.ಆರ್​., ಸಿರಾಜ್​ ಬಿಸರಳ್ಳಿ, ಅಖಿಲ್​ ಹುಡೇವು, ಹನುಮಂತ, ಸಲ್ಮಾ ಜಹಾನ್​, ಎಚ್​.ವಿ.ರಾಜಾಬ, ಎಂ.ಡಿ. ಖಲೀಲ್​ ಹುಡೇವು, ಆನಂದ್​, ಮಾರುತಿ, ನಿಂಗು ಬೆಣಕಲ್​, ಡಾ.ಪಾಷಾ, ಪ್ರದಿಪ್​ ಇತರರಿದ್ದರು.