ಕೊಪ್ಪಳ: ಆರ್ ಟಿಒ ಇ ಚಲನ್ ಹೆಸರಿನ ಎಪಿಕೆ ಫೈಲ್ ಡೌನ್ ಲೋಡ್ ಮಾಡಿಕೊಂಡ ವ್ಯಕ್ತಿಯೊಬ್ಬರು 7.41 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಕರ್ಕಿಹಳ್ಳಿ ಗ್ರಾಮದ ಉದ್ಯಮಿ ಅಮರೇಶ ಹೂಗಾರ ಹಣ ಕಳೆದುಕೊಂಡವರು. ವ್ಯಾಟ್ಸ್ ಆ್ಯಪ್‌ನಲ್ಲಿ ಆರ್‌ಟಿಒ ಇ ಚಲನ್–1 ಹೆಸರಿನ ಎಪಿಕೆ ಫೈಲ್ ಮೊಬೈಲ್ ಗೆ ಬಂದಿದೆ. ಅದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಮಾಡಿಕೊಂಡ ತಕ್ಷಣದಿಂದ ಖಾತೆಯಿಂದ ಹಣ ಕಡಿಯವಾಗಿದೆ. ಆರಂಭದಲ್ಲಿ ವಂಚಕರು 50 ಸಾವಿರ ರೂ. ಎಗರಿಸಿದ್ದಾರೆ. ಹಂತ ಹಂತವಾಗಿ 7.41 ಲಕ್ಷ ರೂ. ಕಡಿತವಾಗಿದೆ. ಈ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದು ಗುರುವಾರ ಪ್ರಕರಣ ದಾಖಲಾಗಿದೆ.