ಜಿಲ್ಲೆ

ಬಾಲಕಿ ಕುಟುಂಬಕ್ಕೆ ಆಯೋಗದಿಂದ ಸಾಂತ್ವಾನ

Kopala - Raveendra V K

ಕೊಪ್ಪಳ: ಬೆಂಗಳೂರಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಾಂತ್ವಾನ ಹೇಳಿದೆ. ಶುಕ್ರವಾರ ಬಾಲಕಿ ಮನೆಗೆ ಭೇಟಿ ನೀಡಿದ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ತಂಡ ಟನೆ ಮಾಹಿತಿ ಪಡೆಯಿತು.

ಈ ವೇಳೆ ಮಾತನಾಡಿದ ಶೇಖರಗೌಡ, ಪ್ರಕರಣದಲ್ಲಿ ನಿಯಮಾನುಸಾರ ಬೆಂಬಲ ವ್ಯಕ್ತಿಗಳನ್ನು ನೇಮಿಸಲು ಹಾಗೂ ಮಧ್ಯಂತರಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ. ಲಭ್ಯ ಯೋಜನೆಯಡಿ ಬಾಲಕಿ ಕುಟಂಬಕ್ಕೆ ಆರ್ಥಿಕ ನೆರವು ನೀಡಿ. ಸಮುದಾಯದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಶಾಲೆ&ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು. ಮಗುವಿನ ಹೆಸರು, ವಿಳಾಸ ಮಾಹಿತಿ ಪ್ರಕಟಿಸುವಂತಿಲ್ಲ. ಪ್ರಕಟಿಸಿದಲ್ಲಿ ಆಯೋಗ ಸ್ವಯಂ ದೂರು ದಾಖಲಸಿಕೊಂಡು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.

ಬಳಿಕ ಗ್ರಾಪಂಗೆ ಭೇಟಿ ನೀಡಿ, ಗ್ರಾಮ ಮಟ್ಟದಲ್ಲಿ ಮಕ್ಕಳ, ಮಹಿಳೆಯರ ಸಭೆ, ಕಾವಲು ಸಮಿತಿ ರಚನೆ ಬಗ್ಗೆ ಮಾಹಿತಿ ಪಡೆದರು. ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗೆ ತೆರಳಿ ಮಕ್ಕಳ ರಕ್ಷಣಾ ನೀತಿ ಸಮರ್ಪಕ ಅನುಷ್ಠಾನ ಮಾಡಲು ತಾಕೀತು ಮಾಡಿದರು. ಬಿಸಿಯೂಟ ಆಹಾರ ಪದಾರ್ಥದಗಳ ಗುಣಮಟ್ಟ ಪರೀಸಿದರು. ಸರ್ಕಾರಿ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಮಕ್ಕಳ ರಕ್ಷಣಾ ನೀತಿ ಬಗ್ಗೆ ಮಾಹಿತಿ ನೀಡದಿರುವುದನ್ನು ಗಮನಿಸಿ ವಿಷಾದಿಸಿದರು. ಶ್ರೀ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸಲು ಸೂಚಿಸಿದರು.

ಸಾಮಾಜಿಕ ಕಾರ್ಯಕರ್ತ ರವಿಕುಮಾರ ಪವಾರ್​, ಜಿಲ್ಲಾ ಮಕ್ಕಳ ರಕ್ಷಣಾ ಟಕದ ಪ್ರತಿಭಾ ಕಾಶಿಮಠ, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ ಸಜ್ಜನ, ಮಹಿಳಾ ಪೊಲೀಸ್​ ಸುಧಾ ಇತರರಿದ್ದರು.