ಕೊಪ್ಪಳ: ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ, ಸಾಮಾಜಿ, ಆರ್ಥಿಕ ಗಣತಿಯನ್ನು ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ರಾಮಣ್ಣ ಎಂಬುವವರು ತಿರಸ್ಕರಿಸಿದ್ದಾರೆ. ಯಾವ ಕಾರಣಕ್ಕೆ ವಿರೋಧಿಸಿರುವೆ ಎಂಬ ಬಗ್ಗೆ ಗಣತಿದಾರರ ಮೂಲಕ ಸರ್ಕಾರಕ್ಕೆ ಪ್ರಮುಖ ಅಂಶವುಳ್ಳ ಪತ್ರ ನೀಡಿದ ಟನೆ ಗುರುವಾರ ನಡೆದಿದೆ.
ಬೆಳಗ್ಗೆ ಗಣತಿದಾರರು ರಾಮಣ್ಣ ಮನೆಗೆ ತೆರಳಿದಾಗ ಕೆಲ ಪ್ರಶ್ನೆಗಳಿಗೆ ರಾಮಣ್ಣ ಆಕ್ಷೇಪ ಎತ್ತಿದ್ದಾರೆ. ಸುಪ್ರಿಂ ಕೋರ್ಟ್ ನಿರ್ದೇಶನದನ್ವಯ ಜಾತಿ ಸಮೀೆ ಮಾಡುವಂತಿಲ್ಲ. ಸಾರ್ವಜನಿಕವಾಗಿ ಜಾತಿ ಕೇಳಬಾರದು. ಸಮೀೆಗೆ ಜಾತಿ, ಉಪ ಜಾತಿ ಅವಶ್ಯವಲ್ಲ. 21,22 ಮತ್ತು 23ನೇ ಪ್ರಶ್ನೆಗಳು ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು ಮಾನವ ಹಕ್ಕಿನ ಉಲ್ಲಂನೆ. 36, 37, 38 ಮತ್ತು 39ನೇ ಪ್ರಶ್ನೆಗಳು ಆದಾಯ ಪ್ರಶ್ನಿಸುತ್ತಿದ್ದು ವ್ಯಕ್ತಿ ನತೆ ಕುಂದಿಸಲಿವೆ. ಮನೆಯಲ್ಲಿ ಎಷ್ಟು ಕೊಠಡಿಗಳಿವೆ ಎಂಬ 43ನೇ ಪ್ರಶ್ನೆ ಅಸಂಬದ್ಧ. ಮನೆಯಲ್ಲಿ ಯಾರಾದರೂ ವಿಧವೆ ಇದ್ದಾರೆಯೇ ಎಂಬುದು ಸಹ ವೈಯಕ್ತಿಕ. 59 ಮತ್ತು 60ನೇ ಪ್ರಶ್ನೆಯೂ ಮಾನವ ಹಕ್ಕು ಉಲ್ಲಂಘಿಸಲಿವೆ. ಈ ಎಲ್ಲ ಪ್ರಶ್ನೆಗಳು ಭಯ ಮತ್ತು ಆತಂಕ ಮೂಡಿಸಿದ್ದು ಗಣತಿಗೆ ಮಾಹಿತಿ ನೀಡುವುದಿಲ್ಲವೆಂದು ತಿರಸ್ಕರಿಸಿ ಮನವಿ ನೀಡಿದ್ದಾರೆ.
ಮತ್ತೊಂದೆಡೆ ಕೊಪ್ಪಳ ತಾಲೂಕಿನ ಅಬ್ಬಿಗೇರಿ ಶಿಕ್ಷಕಿ ನಾಗವೇಣಿ ಗಣತಿಗೆ ಬಂದಿದ್ದು, ಅವರ ಪತಿ ಶಿವರಾಜ ಸಹ ಜೊತೆಗೆ ಬಂದಿದ್ದರು. 2.5ವರ್ಷದ ಮಗು ಇದ್ದು, 1.5 ವರ್ಷದ ಮಗು ಇದ್ದ ಶಿಕ್ಷಕರಿಗೆ ಮಾತ್ರ ಗಣತಿಯಿಂದ ವಿನಾಯಿತಿ ನೀಡಲಾಗಿದೆ. 2.5ವರ್ಷದ ಮಗು ಇದ್ದು ತಾಯಿ ಬಿಟ್ಟು ಇರದ ಕಾರಣ ಪತಿಯೂ ಆಗಮಿಸಿದ್ದರು.