ಕೊಪ್ಪಳ : ಯಲಬುರ್ಗಾ ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ವ್ಯಾಪ್ತಿಯಲ್ಲಿ ಗಣತಿ ಕಾರ್ಯಕ್ಕೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ಆನ್ ಲೈನ್ ವ್ಯವಸ್ಥೆ ಕೈ ಕೊಟ್ಟ ಪರಿಣಾಮ ಸಾರ್ವಜನಿಕರು ಮತ್ತು ಗಣತಿ ದಾರರು ಸಂಕಷ್ಟ ಅನುಭವಿಸಿದರು.
ಆಧಾರ್ಕಾರ್ಡ್, ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿ ನೀಡಿ ಮಾಹಿತಿ ಒದಗಿಸಿದರೂ ಆನ್ ಲೈನ್ ಸಮಸ್ಯೆಯಿಂದ ಅದು ಅಪ್ಲೋಡ್ ಆಗದ ಕಾರಣ ಮತ್ತೆ ಮೊದಲಿನಿಂದ ಮಾಹಿತಿ ನೀಡಲು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಸರ್ವರ್ ಸಮಸ್ಯೆ ಯಿಂದಾಗಿ ಸಮೀಕ್ಷೆ ಮಾಡಲು ತೊಂದರೆಯಾಗುತ್ತಿದೆ ಆಧಾರ್ ಒಟಿಪಿ ತಕ್ಷಣ ಬರುತ್ತಿಲ್ಲ ಕೊನೆಗೆ ದಾಖಲೆ ಅಪ್ಲೋಡ್ ಆಗುತ್ತಿಲ್ಲ ಎಂದು ಸಮೀಕ್ಷೆದಾ ರರು ಹೇಳಿದರು.
ಬೆಳಗ್ಗೆ ಜಾತಿಗಣತಿ ಮಾಡುವುದಕ್ಕೆ ಮನೆಬಾಗಿಲಿಗೆ ಬಂದಾಗ ಆ್ಯಪ್ ಒಪನ್ ಆಗದೆ ಸಮಸ್ಯೆಯಾಗಿದೆ. ಕೆಲವು ಕಡೆ ಒಪನ್ ಆಗಿ ಗಣಿತೀಯ ಪ್ರಶ್ನೆಗಳಿಗೆ ಉತ್ತರಿಸಿ ಇನ್ನೇನ್ ಅಪ್ಲೋಡ್ ಮಾಡಬೇಕು ಅಫ್ಟಿರಲ್ಲಿ ಸರ್ವಸಮಸ್ಯೆಯಿಂದ ಅಪ್ಲೋಡ್ ಆಗದೆ ಮತ್ತೆ ಮೊದಲಿನಿಂದ ಆರಂಭಮಾಡಬೇಕು. ಆಧಾರ್ಓಟಿಪಿ ಬೇಗ ಸಿಗುವುದಿಲ್ಲ ಕೆಲವು ಕಡೆ ಸಾರ್ವಜನಿಕರು ನೀವು ಏನ್ ಗಣತಿ ಮಾಡುತ್ತೀರಿ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಕೇಳುತ್ತೀರಿ ಮೊದಲು ಮೊಬೈಲ್ ಆ್ಯಪ್ ಸರಿ ಮಾಡಿಸಿಕೊಂಡು ಬನ್ನಿ ಸುಮೆ ನಮ್ಮ ಸಮಯ ಯಾಕೆ ವ್ಯರ್ಥ ಮಾಡುತ್ತಿರಿ ಅಂತ ಕೇಳುತ್ತಾರೆ ಎಂದು ಸಮೀಕ್ಷೆಗೆ ಬಂದ ಶಿಕ್ಷಕ ನಾಗರಾಜ ಹೇಳಿದರು.