ಕೊಪ್ಪಳ: ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಮಲಗಿದಾಗ ಪತ್ನಿ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಪತಿಯೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ.
ಗಂಗಮ್ಮ ಡೊಣ್ಣಿ (38) ಕೊಲೆಯಾದ ಮಹಿಳೆ. ಈಕೆಯ ಪತಿ ಶಿವಪ್ಪ ಕೊಲೆ ಆರೋಪಿ. ಕುಡಿತದ ದಾಸನಾಗಿದ್ದ ಶಿವಪ್ಪ ಆಗಾಗ ಹೆಂಡತೊಯೊಡನೆ ಜಗಳ ಮಾಡಿಕೊಳ್ಳುತ್ತಿದ್ದ. ಹಿರಿಯರು ಬದ್ಧವಾದ ಹೇಳಿ ರಾಜಿ ಪಂಚಾಯಿತಿ ಮಾಡಿಸಿದ್ದಾರೆ. ಪತ್ನಿ ಶೀಲ ಶಂಕಿಸಿ ಬುಧವಾರ ರಾತ್ರಿ ಮಲಗಿದಾಗ ಗಂಗಮ್ಮ ಕುತ್ತಿಗೆಯ ಬಲ ಭಾಗವನ್ನು ಕೊಡಲಿಯಿಂದ ಕೊಚ್ಚಿದ್ದಾನೆ. ಮಲಗಿದ ಭಂಗಿಯಲ್ಲಿಯೇ ಗಂಗಮ್ಮ ಪ್ರಾಣ ಬಿಟ್ಟಿದ್ದಾಳೆ.
ವಿಷಯ ತಿಳಿದು ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಮುನಿರಾಬಾದ್ ಪಿಎಸ್ಐ ಸುನೀಲ್ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಘಟನೆ ಮಾಹಿತಿ ಪಡೆದರು. ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಮಹಜರು ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಇಂಥ ಭೀಕರ ಘಟನೆ ನಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಟನೆ ಸಂಬಂಧ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.