ಜಿಲ್ಲೆ

ಬಲ್ಡೋಟಾ ವಿರುದ್ಧ ಉಗ್ರ ಹೋರಾಟ

Kopala - Raveendra V K

ಕೊಪ್ಪಳ: ಯಾವುದೇ ಕಾರಣಕ್ಕೂ ಬಲ್ಡೊಟಾ ಕಾರ್ಖಾನೆ ಆರಂಭಿಸಬಾರದು. ಸರ್ಕಾರ ತಕ್ಷಣ ಪರವಾನಗಿ ಹಿಂಪಡೆಯಬೇಕು. ಇಲ್ಲದಿದ್ದರೆ ಸೆ.5ರ ಬಳಿಕ ಆಪರೇಷನ್​ ಆಂಜನೇಯ ಹೆಸರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ್​ ತಿಳಿಸಿದರು.

ಗವಿಶ್ರೀಗಳು , ಸಾಹಿತಿಗಳು ಸೇರಿ ಇಡೀ ಕೊಪ್ಪಳ ಜನತೆ ಕಾರ್ಖಾನೆ ವಿರೋಧಿಸಿದ್ದಾರೆ. ಕೆರೆ ಒತ್ತುವರಿ ಮಾಡಿ ಜನ&ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು, ಸರ್ಕಾರದ ಕೈಗೊಂಬೆಯಾಗಿದೆ. ಇದೆಲ್ಲ ಸರಿಯಾಗಬೇಕು. ಕೆರೆ ಜನರ ಬಳಕೆಗೆ ನೀಡಬೇಕು. ಕಾರ್ಖಾನೆ ಆರಂಭಿಸಬಾರದು. ಇಲ್ಲದಿದ್ದರೆ ಸೆ.5ರ ನಂತರ ಆಪರೇಷನ ಆಂಜನೇಯ ಹೆಸರಿನಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ಸಂಚಾಲಕ ವಿಜಯಕುಮಾರ ಕವಲೂರು ಮೇಲೆ ರುದ್ರಭೂಮಿಯಲ್ಲಿ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಬಂಧಿಸುತ್ತಿಲ್ಲ. ಹಿಂದೆಯೂ ಹಲವು ಬಾರಿ ಇಂಥ ಟನೆ ನಡೆದಿವೆ ಎಂದರು. ಸಂಚಾಲಕ ವಿಜಯಕುಮಾರ ಮಾತನಾಡಿ, ನಾನು ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದು ಹೋರಾಟದಲ್ಲಿ ತೊಡಗಿರುವೆ. ಕೆಲವರು ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಪ್ರಕರಣ ದಾಖಲಿಸಿದ್ದು ಪೊಲೀಸರು ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ. ಹೋರಾಟ ಮುಂದುವರೆಸುವೆ ಎಂದರು.

ಸಂಚಾಲಕರಾದ ರವಿ ದೇಗಾವ್​, ಮಹೇಶ ಅಲ್ಲಾನಗರ, ಯೂನಸ್​ ನಮಾಜಿ ಇದ್ದರು.