ಜಿಲ್ಲೆ

ಪ್ರತಿಭಾ ಪುರಸ್ಕಾರ ಅ.12ಕ್ಕೆ

Kopala - Raveendra V K

ಕೊಪ್ಪಳ: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂದ ತಾಲೂಕು ಟಕದಿಂದ ಅ.12 ಮಧುಶ್ರೀ ಗಾರ್ಡನ್​ನಲ್ಲಿ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಾಗಿದೆ ಎಂದು ತಾಲೂಕು ಅಧ್ಯಕ್ಷ ವೀರಣ್ಣ ಬುಳ್ಳಾತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2024&25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ವಿಪ ವಿಶ್ರಾಂತ ಸಭಾಪತಿ ವೀರಣ್ಣ ಮತ್ತಿಕಟ್ಟಿ, ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಹುಬ್ಬಳ್ಳಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಮಹೇಶ ಟೆಂಗಿನಕಾಯಿ, ವಿಪ ಸದಸ್ಯರಾದ ಎಸ್​.ವಿ.ಸಂಕನೂರು, ಡಾ.ಚಂದ್ರಶೇಖರ ಪಾಟೀಲ್​ ಭಾಗಿಯಾಗುವರು. ಸ್ಥಳಿಯ ಸಂಸದ, ಶಾಸಕ, ವಿಪ ಸದಸ್ಯರೂ ಆಗಮಿಸಲಿದ್ದಾರೆ. ವಿಶೇಷ ಉಪನ್ಯಾಸಕ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದರು.

ಸಮುದಾಯ ಮುಖಂಡರಾದ ಶಾಂತೇಶ ಸಂಕ್ಲಾಪುರ, ಬಸವರಾಜ ಕಮಲಾಪುರ, ಅಪರ್ಣಾ ಬಳ್ಳೊಳ್ಳಿ, ಅರವಿಂದ ಅಗಡಿ, ಮಂಜುನಾಥ ಅಂಗಡಿ, ರಾಜೇಶ ವಾಲಿ ಇತರರಿದ್ದರು.