ಕೊಪ್ಪಳ: ಮನೆ ಪಕ್ಕದಲ್ಲಿನ ಒಲೆ ಮೇಲೆ ಗಾಡಿ ಓಡಿಸಿ ವಿಜಯಲಕ್ಷಿ$್ಮ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ವಿಪ ಸದಸ್ಯೆ ಹೇಮಲತಾ ನಾಯಕ ಒತ್ತಾಯಿಸಿದರು.
ನಗರದ ಕುವೆಂಪು ನಗರದ ವಿಜಯಲಕ್ಷಿ$್ಮ ಮನೆಗೆ ಶನಿವಾರ ಭೇಟಿ ನೀಡಿ ಮಾತನಾಡಿದರು.
ವಿಜಯಲಕ್ಷಿ$್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ವಿರುದ್ಧವೇ ಪ್ರತಿ ದೂರು ದಾಖಲಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಎಷ್ಟು ಸರಿ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಠಾಣೆಯಲ್ಲಿಯೇ ಆರೋಪಿಗಳಿಗೆ ಜಾಮೀನು ಸಿಗುವ ಕಲಂಗಳನ್ನು ಹಾಕಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಹಿಂದೆ ಲವ್ ಜಿಹಾದ್ ಮಾಡಿದ್ದು, ಅದು ವಿಲವಾಗಿದ್ದು, ಅದೇ ವಿಷಯ ಮುಂದಿಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದಾರೆಂದು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಕಳೆದೆರೆಡು ವರ್ಷದಿಂದ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಈ ಕುಟುಂಬದ ಮೇಲೂ ಅದೇ ಪ್ರಯೋಗ ನಡೆದಿದೆ. ಜಿಹಾದ್ಗೆ ಬಲಿಯಾಗಿದ್ದ ಯುವತಿಯನ್ನು ಕುಟುಂಬದವರು ಮರಳಿ ಕರೆತಂದಿದ್ದಾರೆ. ಅದೇ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಹಲ್ಲೆ ನಡೆದ ಬಗ್ಗೆ ದೂರು ನೀಡಿದರೂ ಕೂಡಲೇ ಪ್ರಕರಣ ದಾಖಲಿಸಿಲ್ಲ. ಅವರ ಮೇಲೆ ಒತ್ತಡ ಹಾಕಿದ್ದು ಯಾರು ಎಂದು ಪ್ರಶ್ನಿಸಿದರು. ತಕ್ಷಣ ಆರೋಪಿಗಳನ್ನು ಬಂಧಿಸಿ ಮತ್ತೊಂದು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಬಿಜೆಪಿ ನಾಯಕರಾದ ರಾಜು ಬಾಕಳೆ, ಗಣೇಶ ಹೊರತಟ್ನಾಳ, ಅಪ್ಪಣ್ಣ ಪದಕಿ, ಮಹೇಶ ಅಂಗಡಿ, ಚಂದ್ರು ಕವಲೂರು, ಸುನಿಲ್ ಹೆಸರೂರು, ರಮೇಶ ಕವಲೂರು, ನೀಲಕಂಠಯ್ಯ ಹಿರೇಮಠ ಇತರರಿದ್ದರು.