ಜಿಲ್ಲೆ

ರೈತರಿಗೆ ಪರಿಹಾರ ವಿತರಿಸಿ

Kopala - Raveendra V K

ಕೊಪ್ಪಳ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆ ಹಾನಿಯಾಗಿದ್ದು, ಸೋಮವಾರ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.

ಹುಲಿಗಿ, ಶಿವಪುರ, ಬಂಡಿ ಹರ್ಲಾಪುರ, ಬಸಾಪುರ ಗ್ರಾಮಕ್ಕೆ ತೆರಳಿದ ನಿಯೋಗ ಹಾನಿಯಾದ ಭತ್ತ ವೀಸಿತು. ರೈತರಿಂದ ಹಾನಿ ಬಗ್ಗೆ ಮಾಹಿತಿ ಪಡೆಯಿತು. ಭತ್ತ ಕೈಗೆ ಬಂದಿದ್ದು ಕಟಾವು ಹಂತ ತಲುಪಿದೆ. ಮಳೆ&ಗಾಳಿಯಿಂದ ಧರೆಗುರುಳಿದ್ದು, ಇಳುವರಿ ಕುಸಿತವಾಗಲಿದೆ. ದಿಕ್ಕು ತೋಚದಾಗಿದೆ. ಈವರೆಗೆ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿಲ್ಲ. ಪರಿಹಾರ ಭರವಸೆಯನ್ನೂ ನೀಡಿಲ್ಲವೆಂದು ಅನ್ನದಾತರು ಅಳಲು ತೋಡಿಕೊಂಡರು.

ವಿಪ ಸದಸ್ಯೆ ಹೇಮಲತಾ ನಾಯಕ ಸ್ಥಳದಲ್ಲೇ ಜಿಲ್ಲಾಧಿಕಾರಿ ನಲಿನ್​ ಅತುಲ್​ ಹಾಗೂ ತಹಸೀಲ್ದಾರ್​ ವಿಠ್ಠಲ್​ ಚೌಗಲಾ ಅವರಿಗೆ ಕರೆ ಮಾಡಿ ವಾಸ್ತವ ಗಮನಕ್ಕೆ ತಂದರು. ರೈತರಿಗೆ ನಷ್ಟವಾಗಿದ್ದು, ಪರಿಶೀಲಿಸಿ ವರದಿ ಸಲ್ಲಿಸಿ ಪರಿಹಾರ ಕೊಡುವಂತೆ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಡಿಸಿ, ಗಂಗಾವತಿ ತಾಲೂಕಿನ ಭತ್ತ ಹಾನಿಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ಹಾನಿ ಆದ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ರೈತರಿಗೆ ಪರಿಹಾರ ಕೊಡಿಸಲಾಗುವುದೆಂದರು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದಿಪ ಹಿಟ್ನಾಳ್​, ಪ್ರಮುಖರಾದ ಪ್ರಭುರಾಜ್​ ಪಾಟೀಲ್​, ಖಾಜಾಹುಸೇನ್​ ಹೊಸಳ್ಳಿ, ಹನುಮಂತಪ್ಪ ಕಾಟ್ರಳ್ಳಿ, ಯೇಸುರತ್ನಂ, ಕನಕಪ್ಪ, ಹೈದರ ಅಲಿ, ಮಹೇಶ ಮಂಗಳೂರ, ವಿಶ್ವನಾಥ ಹೀರೆಮಠ್​, ಬಾಬುಗೌಡ್ರ, ನರಸಿಂಹಲು , ಕೊಟ್ರೇಶ ಅಂಗಡಿ, ಜಂಬಣ್ಣ ಬಾರಕೇರ್​, ಕಿರಣ ಹುಲಗಿ ಇತರರಿದ್ದರು.