ಜಿಲ್ಲೆ

ಬಿಜೆಪಿ ನಾಯಕರ ವಿರುದ್ಧ ಆಗಲಿ ಕ್ರಮ

Kopala - Raveendra V K

ಕೊಪ್ಪಳ: ಶಾಸಕ ಬಸನಗೌಡ ಯತ್ನಾಳ್​, ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ದ್ವೇಷ ಭಾಷಣ, ವಕ್ಫ ಆಸ್ತಿಗಳ ಬಗ್ಗೆ ತಪು ಮಾಹಿತಿ ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಅಲ್ಪಸಂಖ್ಯಾತರ ವಿಭಾಗ ಪದಾಧಿಕಾರಿಗಳು ಬುಧವಾರ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿಗೆ ಮನವಿ ಸಲ್ಲಿಸಿದರು.

ವಿಜಯಪುರದಲ್ಲಿ ಮೂವರು ನಾಯಕರು ಮುಸ್ಲಿಂ ಸಮುದಾಯ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ಹಿಂಸಾರಕ್ಕೆ ಪ್ರಚೋದಿಸಿದ್ದಾರೆ. ವಕ್ಫ ಆಸ್ತಿಗಳ ಬಗ್ಗೆ ತಪು$್ಪ ಮಾಹಿತಿ ಹರಡಿದ್ದಾರೆ. ಇಸ್ಲಾಂ ಮತ್ತು ಅವರ ಅನುಯಾಯಿಗಳನ್ನು ನಿಂದಿಸಿದ್ದು, ಕೋಮು ಪ್ರಚೋದನೆ ನೀಡಿದ್ದಾರೆ. ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.

ಯತ್ನಾಳ ಆಯುಧ ಪೂಜೆ ಕೇವಲ ಪೂಜೆ ಅಲ್ಲ. ಸಮಯ ಬಂದರೆ ಕೊಲ್ಲಲು ಎಂದರೆ, ಸಿ.ಟಿ.ರವಿ ಹಿಂದು ದೇವಾಲಯಗಳ ಒತ್ತುವರಿ ಸಕ್ರಮಕ್ಕೆ ವಕ್ಫ ಕಾಯ್ದೆ ತರಲಾಗಿದೆ ಎಂದಿದ್ದಾರೆ. ಸೂಲಿಬೆಲೆ ಸಾಧ್ಯವಾದರೆ ಅವರನ್ನು ಭಾರತ ಬಿಟ್ಟು ಹೋಗುವಂತೆ ಪ್ರಚೋದಿಸಿದ್ದಾರೆಂದು ತಿಳಿಸಿದರು.

ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಜಿಲ್ಲಾ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಸೈಯದ್​ ಮೈನುದ್ದೀನ್​ ಮುಲ್ಲಾ, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್​ ಪಾಷಾ ಪಲ್ಟನ್​, ಪ್ರಮುಖರಾದ ಕೆ.ಎಂ.ಸೈಯ್ಯದ್​, ಮಾನ್ವಿ ಪಾಷಾ, ಇತರರಿದ್ದರು.