ಜಿಲ್ಲೆ

ಹಿಂದು ವಿರೋಧಿ ನೀತಿ ಕಾಂಗ್ರೆಸ್​ ಡಿಎನ್​ಎ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪ

ಕೊಪ್ಪಳ: ಕಾಂಗ್ರೆಸ್ಸಿಗರ ಡಿಎನ್​ಎಯಲ್ಲಿಯೇ ಹಿಂದು ವಿರೋಧಿ ನೀತಿ ಅಡಗಿದೆ. ಕರ ಸೇವಕರನ್ನು ಬಂಧಿಸುವ ಮೂಲಕ ಹಿಂದು ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಬೆದರಿಕೆಗೆಲ್ಲ ನಾವು ಬಗ್ಗುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಶ್ರೀಕಾಂತ ಪೂಜಾರಿ ಬಂಧನವಾಗಿದ್ದು ಅತ್ಯಾಚಾರ, ಕಳ್ಳತನ ಪ್ರಕರಣದಲ್ಲಿ ಅಲ್ಲ. ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಲ್ಲಿ ಭಯ ಹುಟ್ಟಿಸಬೇಕೆಂದೇ ಹೀಗೆ ಮಾಡಲಾಗಿದೆ. ಜಗದೀಶ ಶೆಟ್ಟರ್​ ರಾಮಸೇನೆ ಹೋರಾಟದಲ್ಲಿದ್ದವರು. ಅವರೂ ಕರ ಸೇವಕರ ಬಗ್ಗೆ ಮಾತನಾಡುತ್ತಿದ್ದಾರೆ.

ಪಕ್ಷ ಬದಲಿಸಿದ ತಕ್ಷಣ ಹೇಳಿಕೆ ಬದಲಿಸಬಾರದು. ದೇಶದ ಕಾನೂನು ಎಲ್ಲರಿಗೂ ಒಂದೇ ಎನ್ನುವ ಸಚಿವ ಪರಮೇಶ್ವರ್​, ಡಿ.ಕೆ.ಶಿವಕುಮಾರ್​ ವಿರುದ್ಧ ಪ್ರಕರಣ ದಾಖಲಾದಾಗಾ ರಾಜ್ಯಾದ್ಯಂತ ಕಾಂಗ್ರೆಸ್​ ಯಾಕೆ ಪ್ರತಿಭಟನೆ ನಡೆಸಿತೆಂಬುದನ್ನು ಮರೆತಂತಿದೆ ಎಂದು ಶುಕ್ರವಾರ ಕೊಪ್ಪಳದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನನ್ನ ಕಾರ್​ ಅಪಘಾತವಾಗಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಲಿ. ಸುಳ್ಳಾದಲ್ಲಿ ಅವರ ವಿರುದ್ಧ ನಾನು ಕೇಸ್​ ದಾಖಲಿಸುವೆ. ಗೋಧ್ರಾ ಹತ್ಯೆ ನಡೆಯಬಹುದೆಂದು ಬಿ.ಕೆ.ಹರಿಪ್ರಸಾದ ಹೇಳುತ್ತಿದ್ದಾರೆ. ಸಿಎಂ ಹಾಗೂ ಹರಿಪ್ರಸಾದಗೆ ಇದರ ಒಳಸುಳಿ ಗೊತ್ತಿದೆ. ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಲಿ.

ಹಿಂದುಪರ ಸಂಟನೆಗಳು ನಿರಂತರವಾಗಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಿವೆ. ಕಾಂಗ್ರೆಸ್​ನವರು ಕರಸೇವಕರಾಗಿದ್ದಾರಾ ? ಇವರ ಕೆಟ್ಟ ನೀತಿಯಿಂದಲೇ ಲೋಕಸಭೆಯಲ್ಲಿ 40 ಸ್ಥಾನಕ್ಕೆ ಬಂದಿದ್ದಾರೆ. ನಮ್ಮ ತಪ್ಪಿನಿಂದಾಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಲೋಕಸಭೆಯಲ್ಲಿ ಈ ಬಾರಿ ಕಾಂಗ್ರೆಸ್​ಗೆ ಒಂದೂ ಸ್ಥಾನ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಬಿನ್​ಲಾಡೆನ್​, ಟಿಪು$್ಪ ಸುಲ್ತಾನ್​ ಮಾದರಿ ಆಡಳಿತದಿಂದ ದೇಶ ಉಳಿಸಿಕೊಳ್ಳಲಾಗುವುದಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ಗವಿಸಿದ್ದೇಶನಲ್ಲಿ ಬೇಡಿಕೊಂಡಿರುವೆ. ನಾನು ಈವರೆಗೆ ಏನೂ ಬಯಸಿಲ್ಲ. ಪಕ್ಷ ಸೂಚಿಸಿದ ಕೆಲಸ ಮಾಡಿರುವೆ. ಲೋಕಸಭೆಗೆ ಸ್ಪರ್ಧಿಸುವ ವಿಷಯ ಪಕ್ಷ ನಿರ್ಧರಿಸುತ್ತದೆ. -ಸಿ.ಟಿ.ರವಿ.ಮಾಜಿ ಸಚಿವ
-ಸಿ.ಟಿ.ರವಿ.ಮಾಜಿ ಸಚಿವ