ಜಿಲ್ಲೆ

ಸಾಲ ಮಾಡಿದ್ದೆ ಸಾಧನೆ : ಡಾ.ಬಸವರಾಜ ಕ್ಯಾವಟರ್​

Kopala - Raveendra V K

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್​ ನಲ್ಲಿ ಮೈಸೂರಿಗೆ ಮಾತ್ರ ಸೀಮಿತವಾದಂತಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ವೈದ್ಯ ಬಸವರಾಜ ಕ್ಯಾವಟರ್​ ಆರೋಪಿಸಿದ್ದಾರೆ.

ರಾಜ್ಯದ 31 ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತ ಬಜೆಟ್​ ಮಂಡನೆಯಾಗಿಲ್ಲ. ಹೆಚ್ಚು ಅನುದಾನ, ಯೋಜನೆಗಳನ್ನು ಮೈಸೂರಿನ ಪಾಲು ಮಾಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಉಳಿದ ಜಿಲ್ಲೆಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ, ಅಲ್ಪ ಸಂಖ್ಯಾತರ ತುಷ್ಠಿಕರಣ ಸದರಿ ಬಜೆಟ್​ ಮೂಲಕ ಕಂಡು ಬರುತ್ತಿದೆ. ಹೆಸರಿಗೆ ಮಾತ್ರ ಬಜೆಟ್​ ನಲ್ಲಿ ಸರ್ವ ಜನಾಂಗಕ್ಕೂ ನ್ಯಾಯ ಒದಗಿಸುವ ಬಜೆಟ್​ ಇದಾಗಿದೆ ಎನ್ನುವ ವ್ಯಾಖ್ಯವಾಗಿದೆ. ಆದರೆ, ವಾಸ್ತವದಲ್ಲಿಲ್ಲ ಎನ್ನುವುದು ಗಮರ್ನಾಹ ಸಂಗತಿ. ಕೇವಲ ಒಂದು ವರ್ಗ ಓಲೈಸುವುದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಎಂದುಕೊಂಡಿದ್ದಾರೆ.

ಇದಲ್ಲದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. 371 - ಜೆ ಹೋರಾಟದ ಫಲವಾಗಿ ದೊರೆತ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಟ್ಟು ಅನುದಾನ ಕ್ರೂಢಿಕರಿಸಿ, ಬಿಡುಗಡೆ ಮಾಡುವುದು ಬಿಟ್ಟು ಹಂಚಿಕೆ ಮಾಡಲಾಗಿದೆ, ಇದು ಸರಿಯಲ್ಲ.

ಇನ್ನೂ ಸಾಲ ಮಾಡುವ ಪ್ರಮಾಣ ಗಣನೀಯ ಏರಿಕೆಯಾಗಿದೆ. ವರ್ಫಿದಿಂದ ವರ್ಫಿಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯದ ಪ್ರತಿಯೊಬ್ಬರ ಮೇಲೆ ಸಾಲದ ಹೊರೆಯನ್ನು ಸರಕಾರ ಹೇರುತ್ತಿದೆ. ಬಜೆಟ್​ ಮೂಲಕ ಈ ವಿಚಾರ ತಿಳಿದು ಬಂದಿದೆ. ಹೀಗಾಗಿ ಇದು ಸಾಲದ ಬಜೆಟ್​ ಅಂದರೇ ತಪ್ಪಾಗಲಾರದು ಎಂದು ವಿಶ್ಲೇಷಿಸಿದ್ದಾರೆ.

ಇನ್ನೂ ಕೊಪ್ಪಳ ಜಿಲ್ಲೆಗೂ ಹೇಳಿಕೊಳ್ಳುವಂತ ಯೋಜನೆ ಘೋಷಿಸಿಲ್ಲ. ಸೂಪರ್​ ಸ್ಪೇಫಿಾಲಿಟಿ ಆಸ್ಪತ್ರೆ ಘೋಫಿಣೆ ಮಾಡಿದಂತೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಬೇಕು. ಕೇವಲ ಘೋಫಿಣೆ ಮಾಡಿ ಕೈ ಬಿಡಬಾರದು. ಈ ಹಿಂದಿನ ಬಜೆಟ್​ ನಲ್ಲಿ ಘೋಷಿಸಿದ ಯೋಜನೆಗಳು ಹಾಗೆ ಉಳಿದಿವೆ, ವಿನಹ ಅನುಫಿ್ಠಾನಗೊಂಡಿಲ್ಲ. ಹೀಗಾಗಿ ಸೂಪರ್​ ಸ್ಪೇಫಿಾಲಿಟಿ ಆಸ್ಪತ್ರೆಯೂ ಈ ಸಾಲಿಗೆ ಸೇರಬಾರದು ಎಂದುಆಗ್ರಹಿಸಿದ್ದಾರೆ.