ಜಿಲ್ಲೆ

ವೀಲಿಂಗ್​ ಮಾಡುತ್ತಿದ್ದವರ ಬಂಧನ

Kopala - Raveendra V K

ಕೊಪ್ಪಳ: ನಗರದ ಹೊರವಲಯದ ಹೂವಿನಾಳ ರಸ್ತೆ ಸಮೀಪ ದ್ವಿಚಕ್ರವಾಹನದಲ್ಲಿ ವೀಲಿಂಗ್​ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಹೊಸಪೇಟೆಯ ಜಾರ್​ ತಂದೆ ಮಾಬುಸಾಬ್​ ಹಾಗೂ ಕೊಪ್ಪಳದ ಮೇರಾಜ ಬಂಧಿತರು. ಇಬ್ಬರು ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಸ್ಕೂಟಿಯಲ್ಲಿ ವೀಲಿಂಗ್​ ಮಾಡಿದ್ದಾರೆ. ಈ ಬಗ್ಗೆ ಶಂಭು ಎಂಬಾತ ಗ್ರಾಮೀಣಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪಿಎಸ್​ಐ ಅಶೋಕ ಬೇವೂರು ತಂಡ ಸ್ಥಳಕ್ಕೆ ತೆರಳಿ ಬೈಕ್​ ತಡೆಯುವಂತೆ ಸೂಚಿಸಿದ್ದಾರೆ. ಹೆದರಿದ ಸವಾರರು ವೇಗವಾಗಿ ತೆರಳಿದ್ದಾರೆ. ಬೆನ್ನಟ್ಟಿದ ಪೊಲೀಸರು ಬೈಕ್​ ಸಮೇತ ಹಿಂಬದಿ ಕೂತಿದ್ದ ಮೇರಾಜನನ್ನು ಹಿಡಿದಿದ್ದಾರೆ. ಆತನಿಂದ ಜಾಪರ್​ನ ಮಾಹಿತಿ ಪಡೆದು ಬಂಧಿಸಲಾಗಿದೆ. ಸ್ಕೂಟಿ ವಶಕ್ಕೆ ಪಡೆದಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.