ಜಿಲ್ಲೆ

ಬೈಕ್​ ಕಳ್ಳರು ಒಂದೇ ದಿನದಲ್ಲಿ ಅರೆಸ್ಟ್​

Kopala - Raveendra V K

ಕೊಪ್ಪಳ: ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಬೈಕ್​ ಕದ್ದ ಕಳ್ಳರನ್ನು ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ ಮೂರು ಬೈಕ್​ ವಶಕ್ಕೆ ಪಡೆದಿದ್ದಾರೆ.

ಬೂದಗುಂಪಾದ ಶ್ರೀಕಾಂತ್​ ಎಂಬುವವರ ಒಂದು ಲಕ್ಷ ರೂ. ಮೌಲ್ಯದ ರಾಯಲ್​ ಎನ್ಪೀಲ್ಡ್​ ಬೈಕ್​ ಅ.28ರಂದು ಮನೆ ಮುಂದೆ ನಿಲ್ಲಿಸಿದಾಗಲೇ ಕಳ್ಳತನವಾಗಿದೆ. ಈ ಬಗ್ಗೆ ಮುನಿರಾಬಾದ್​ ಠಾಣೆಗೆ ಶ್ರೀಕಾಂತ್​ ನ.5ರಂದು ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಸಿಕೊಂಡ ಪೊಲೀಸರು ತಂಡ ರಚಿಸಿ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಗಂಗಾವತಿಯ ಆಕಾಶ ಕಾರಪುಡಿ ಮತ್ತು ಅಬ್ದುಲ್​ ಸಮೀರ್​ ಬಂಧಿತರು. ಬೂದಗುಂಪಾ ಹಾಗೂ ಹುಲಿಗಿಯಲ್ಲಿ ಬೈಕ್​ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು ಮೂರು ಬೈಕ್​ ವಶಕ್ಕೆ ಪಡೆಯಲಾಗಿದೆ.