ಜಿಲ್ಲೆ

ಅಪಘಾತದಲ್ಲಿ ಬೈಕ್ ಸವಾರ ಸಾವು

Kopala - Raveendra V K

ಕೊಪ್ಪಳ :ಬತಾಲೂಕಿನ ಗಿಣಿಗೇರಿ ಗ್ರಾಮದ ಕನಕಾಪುರದ ಪೆಟ್ರೋಲ್ ಬಂಕ್ ಹತ್ತಿರ ಗುರುವಾರ ಸಂಜೆ ನಡೆದ ಬೈಕ್ ಮತ್ತು ಕಾರ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ.

ಸಂಡೂರು ತಾಲೂಕಿನ ಜಯಸಿಂಗಪುರದ ಭೀಮಪ್ಪ (39) ಮೃತ.

ಭೀಮಪ್ಪ ಕನಕಾಪುರ ಹತ್ತಿರದ ಕಂಪನಿಯೊಂದರಲ್ಕಿ ಟಿಪ್ಪರ್ ಲೋಡಿಂಗ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನಿತ್ಯ ಸ್ವಗ್ರಾಮದಿಂದ ಕನಕಾಪುರಕ್ಕೆ ಆಗಮಿಸುತ್ತಿದ್ದ.

ಗುರುವಾರ ಸಂಜೆ ಸಂಡೂರಿಗೆ ಬೈಕ್ ನಲ್ಲಿ ಹೊರಟಾಗ ಹಿಂದೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿ ಅದುನೀಗಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.