DEVENDRAPPA AND MOUNESH  
ಜಿಲ್ಲೆ

ಬೈಕ್ ಅಪಘಾತಲ್ಲಿ ತಂದೆ-ಮಗ ಸಾವು

ಕೊಪ್ಪಳ: ತಾಲೂಕಿನ ಕೂಕ‌ನಪಳ್ಳಿ ಬಳಿ ಎನ್ಎಚ್ 50ರಲ್ಲಿ ಬೈಕ್ ಗೆ ಲಾರಿ‌ ಗುದ್ದಿದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನ ಇರಕಲ್ ಗಡಾ ಗ್ರಾಮದ ನಿವಾಸಿಗಳಾದ ದೇವೇಂದ್ರಪ್ಪ ಬಡಿಗೇರ (55) ಮತ್ತು ಇವರ ಮಗ ಮೌನೇಶ ಬಡಿಗೇರ (31) ಮೃತ ದುರ್ದೈವಿಗಳು.

ಕೂಕನಪಳ್ಳಿ ಗ್ರಾಮದ ಬಳಿ ಇಬ್ಬರು ಬೈಕ್ ನಲ್ಲಿ ತೆರಳುವಾಗ ಹಿಂದಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ. ಆಯ ತಪ್ಪಿ ರಸ್ತೆಗೆ ಬಿದ್ದ ಸವಾರರ ತಲೆ ಮೇಲೆ ಲಾರಿ ಗಾಲಿ ಹತ್ತಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ.

ತಮಿಳುನಾಡು ಮೂಲದ‌ ಲಾರಿಯಾಗಿದ್ದು, ಚಾಲಕ ರಾಜ ಎಂಬಾತನ ವಿರುದ್ಧ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.