ಜಿಲ್ಲೆ

ಜಾತಿ ವಿವರ ಸರಿಯಾಗಿ ನಮೂದಿಸಿ

Kopala - Raveendra V K

ಕೊಪ್ಪಳ: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಕಲ್ಪಿಸಲು ಸಮೀೆ ಕೈಗೊಂಡಿದ್ದು ಸಮೀೆ ಮಾಡುವವರು ಮನೆಗೆ ಬಂದಾಗ ಭೊವಿ ಸಮುದಾಯದವರು ಸರಿಯಾದ ಮಾಹಿತಿ ನೀಡಿ. ಜಾತಿ ಕಾಲಂನಲ್ಲಿ ಭೋವಿ, ವಡ್ಡರ ಎಂದು ನಮೂದಿಸುವಂತೆ ಸಿದ್ದರಾಮೇಶ್ವರ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂದ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನ್ಯಾಯಾಧೀಶ ನಾಗಮೋಹನ್​ ದಾಸ್​ ಅಧ್ಯಕ್ಷತೆಯ ಸಮಿತಿ ಸಮೀೆ ಕೈಗೊಂಡಿದೆ. ಈಗಾಗಲೇ ಸಮೀೆ ಮಾಡುವವರಿಗೆ ತರಬೇತಿ ನೀಡಿದೆ. ಮೇ 5ರಿಂದ ಮನೆ ಮನೆಗೆ ಸಮೀಾಕಾರರು ಬರಲಿದ್ದಾರೆ. ಆಗ ನಮ್ಮ ಸಮುದಾಯದ ಜನರು ಸರಿಯಾಗಿ ಮಾಹಿತಿ ನೀಡಬೇಕು. ನಮ್ಮ ಸಮುದಾಯದ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದ ಪದಾಧಿಕಾರಿಗಳು ಸ್ವಯಂ ಜವಾಬ್ದಾರಿ ತೆಗೆದುಕೊಂಡು ಜನರಿಗೆ ಜಾಗೃತಿ ಮೂಡಿಸಿ. 36 ಪ್ರಶ್ನಾವಳಿ ಇರಲಿದ್ದು, ಅವುಗಳಿಗೆ ಸರಿಯಾದ ಉತ್ತರ ನೀಡಬೇಕು. ಜಾತಿ ಕಾಲಂನಲ್ಲಿ ಭೋವಿ, ವಡ್ಡರ ಎಂದೇ ಬರೆಸಬೇಕು. ಉಪ ಜಾತಿ ಹೆಸರು ಬರೆಸಬಾರದು ಎಂದರು.

ಕುಟುಂಬದ ಎಲ್ಲ ಸದಸ್ಯರ ವಿವರ ನೀಡಿ. ಕೆಲಸ ಅರಸಿ ಬೇರೆ ಊರಿಗೆ ಹೋದವರನ್ನು ಕರೆಸಬೇಕು. ಸಮೀೆ ಮಾಡುವಾಗ ಹಾಜರಾಗುವಂತೆ ಮನವೊಲಿಸಿ. ಗ್ರಾಮ ಮಟ್ಟದಲ್ಲಿ ಸಮುದಾಯ ಜನರ ಸಭೆ ನಡೆಸಿ ತಿಳಿವಳಿಕೆ ಮೂಡಿಸಿ. ಯಾರೋಬ್ಬರೂ ಸಮೀೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಸರ್ಕಾರ ಕನಿಷ್ಠ 30&40 ದಿನಗಳವರೆಗೆ ಸಮೀೆಗೆ ಅವಕಾಶ ನೀಡಬೇಕಿತ್ತು. ಕೇವಲ 20 ದಿನ ನೀಡಿದ್ದು ಸರಿಯಲ್ಲ. ಈ ಬಗ್ಗೆ ಮರು ಪರಿಶೀಲನೆ ಮಾಡಿ ಅವಧಿ ವಿಸ್ತರಿಸಿದರೆ ಅನುಕೂಲ ಎಂದರು. ಸಮುದಾಯ ನಾಯಕರಾದ ವೆಂಟಕೇಶ ಭೋವಿ, ಲಕ್ಷ$್ಮಣ ಪೂಜಾರ, ನಾಗರಾಜ ಭೋವಿ, ಮುತ್ತಣ್ಣ ಭೋವಿ, ಅರುಣ್​ಕುಮಾರ್​ ಭೋವಿ, ಕೆಂಚಪ್ಪ ಭೊವಿ ಇತರರಿದ್ದರು.