ಜಿಲ್ಲೆ

ಭಾಗ್ಯನಗರ ಫಾರ್ಮ್ 3 ವಿತರಣೆ ಶಿಬಿರ

ಕೊಪ್ಪಳ : ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿಯಿಂದ ನ.25ರಿಂದ ಡಿ.5ವರೆಗೆ ವಿವಿಧ ವಾರ್ಡ್​ಗಳಲ್ಲಿ ಸ್ಥಳದಲ್ಲೇ ಇ ಆಸ್ತಿ ಪ್ರಮಾಣ ಪತ್ರ ವಿತರಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಸುರೇಶ ಬಬಲಾದ ತಿಳಿಸಿದ್ದಾರೆ.

ನ.25ರಂದು 1ರಿಂದ 3ನೇ ವಾರ್ಡ್​ ಕರಡಿ ಮಸೂತಿ ಹತ್ತಿರ, 26ರಂದು 4ರಿಂದ 7ನೇ ವಾರ್ಡ್​ ನೀಲಕಂಠೇಶ್ವರ ದೇವಸ್ಥಾನ ಹತ್ತಿರ, 28ರಂದು 8ರಿಂದ 12ನೇ ವಾರ್ಡ್​ ಬನಶಂಕರಿ ದೇವಸ್ಥಾನ ಹತ್ತಿರ, 30ರಂದು 13ರಿಂದ 15ನೇ ವಾರ್ಡ್​ ಮರಿಯಮ್ಮ ದೇವಸ್ಥಾನ ಹತ್ತಿರ, ಡಿ.3ರಂದು 16,17ನೇ ವಾರ್ಡ್​ ಕುವೆಂಪು ವೃತ್ತದ ಹತ್ತಿರ, ಡಿ.5ರಂದು 18,19ನೇ ವಾರ್ಡ್​ ಕಿನ್ನಾಳ ಮುಖ್ಯ ರಸ್ತೆ ಹತ್ತಿರ ಬೆಳಗ್ಗೆ 10ರಿಂದ ಸಂಜೆ 5ಗಂಟೆವರೆಗೆ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ನಮೂನೆ 3 ವಿತರಣೆ, ಆಸ್ತಿ ತೆರಿಗೆ ಬರೆಸಿಕೊಳ್ಳುವಿಕೆ, ನೀರಿನ ಕರ ಭರಿಸುವಿಕೆ, ಅನಧಿಕೃತ ನಗಳಗಳನ್ನು ಅಧಿಕೃತಗೊಳಿಸುವುದು, ಉದ್ಯಮ ಪರವಾನಗಿ ನೀಡಲಾಗುವುದು. ಅಗತ್ಯ ದಾಖಲೆಗಳೊಂದಿಗೆ ಶಿಬಿರಕ್ಕೆ ಹಾಜರಾಗಿ ಸೌಲಭ್ಯ ಪಡೆಯುವಂತೆ ಮನವಿ ಮಾಡಿದ್ದಾರೆ.