ಜಿಲ್ಲೆ

ನಾಳೆ ಕೊಪ್ಪಳ ಬಂದ್​

ಕೊಪ್ಪಳ: ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ೆ.24 (ಸೋಮವಾರ) ಬಂದ್​ಗೆ ಕರೆ ಕೊಟ್ಟಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್​ ಇರಲಿದೆ.

ಬೆಳಗ್ಗೆ 9 ಗಂಟೆಗೆ ಗವಿಮಠ ಆವರಣದಿಂದ ಜಾಥಾ ಆರಂಭವಾಗಲಿದೆ. ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪುವುದು. ದಾರಿಯುದ್ದಕ್ಕೂ ಕುಡಿವ ನೀರು, ಮಜ್ಜಿಗೆ, ಜ್ಯೂಸ್​ ಸೇವೆ ಇರಲಿದೆ. ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ಇರಲಿದೆ. ಗವಿಶ್ರೀಗಳು ಸೇರಿದಂತೆ ಪ್ರಮುಖರು ಜನರನ್ನು ಉದ್ದೇಶಿಸಿ ಮಾತನಾಡುವರು. ಆಗಮಿಸಿದವರಿಗೆ ತಾಲೂಕು ಕ್ರೀಡಾಂಗಣದಲ್ಲೇ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರಿಗೆ ಸೇವೆ ಬೈಪಾಸ್​ವರೆಗೆ ಇರಲಿದೆ. ನಗರದ ಒಳಭಾಗದಲ್ಲಿ ವಾಹನಗಳ ಓಡಾಟ ಇರುವುದಿಲ್ಲ. 100ಕ್ಕೂ ಹೆಚ್ಚು ಸಂಟನೆಗಳು ಬಂದ್​ ಬೆಂಬಲಿಸಿದ್ದು, ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಹೊರರೋಗಿ ವಿಭಾಗ (ಒಪಿಡಿ)ಸೇವೆ ಸ್ಥಗಿತವಾಗಲಿದೆ. ಖಾಸಗಿ ಶಾಲೆಗಳು ರಜೆ ಘೋಷಿಸಿದ್ದು, ವರ್ತಕರು, ವ್ಯಾಪಾರಿಗಳು, ಹೋಟೆಲ್​ಗಳು, ಪೆಟ್ರೋಲ್​ ಬಂಕ್​ ಸೇರಿ ಬಹುತೇಕ ಸೇವೆಗಳು ಬಂದ್​ ಇರಲಿವೆ.