ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಪದಾಧಿಕಾರಿಗಳು ಬುಧವಾರ ಕೊಪ್ಪಳದಲ್ಲಿ ಯಾತ್ರೆ ನಡೆಸಿದರು. ಪ್ರಮುಖರಾದ ಶ್ರೀಪಾದ ಭಟ್​, ಅಲ್ಲಮಪ್ರಭು ಬೆಟ್ಟದೂರ, ಡಿ.ಎಚ್​.ಪೂಜಾರ, ಬಸವರಾಜ ಶೀಲವಂತರ, ಬಸವರಾಜ ನರೆಗಲ್​, ಸಂಜಯ ದಾಸ್​, ಕಾಶಪ್ಪ ಚಲುವಾದಿ, ಲಿಂಗರಾಜ ಬೆಣಕಲ್​ ಇದ್ದರು.  
ಜಿಲ್ಲೆ

ಕೊಪ್ಪಳದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಪದಾಧಿಕಾರಿಗಳಿಂದ ಯಾತ್ರೆ

ಕೊಪ್ಪಳ: ಕೋಮುವಾದ ಸೋಲಿಸಿ ದೇಶ ಉಳಿಸಬೇಕಿದೆ ಎಂದು ಆಗ್ರಹಿಸಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಸಂಕಲ್ಪ ಯಾತ್ರೆ ನಡೆಸಿದರು.

ಪ್ರಧಾನ ಮಂತ್ರಿ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಜನ ತೀರ್ಪು ನೀಡುವ ಮುನ್ನವೇ ತಾವು ಘೋಷಿಸಿಕೊಳ್ಳುವುದು ಸರ್ವಾಧಿಕಾರಿ ಧೋರಣೆ. ಚುನಾವಣಾ ಆಯೋಗ, ಸಿಬಿಐ, ಜಾರಿ ನಿರ್ದೆಶನಾಲಯ ಇನ್ನಿತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ಟನೆ ಮುಂದಿಟ್ಟುಕೊಂಡರೆ, ಈ ಬಾರಿ ಶ್ರೀರಾಮನ ಮಂದಿರ ನಿರ್ಮಾಣ ವಿಷಯವನ್ನು ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲು ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಬಾರಿ ಚುನಾವಣೆಯಲ್ಲಿ ಅವರ ಲೆಕ್ಕಾಚಾರ ತಲೆಕೆಳಗಾಗಲಿದೆ. ಜನರನ್ನು ಸುಲಿಗೆ ಮಾಡುವ ಶತ್ರುಗಳು ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ. ಚುನಾವಣಾ ಬಾಂಡ್​ ಹರಗಣ ಮೂಲಕ ತನ್ನ ಭ್ರಷ್ಟಾಚಾರ ಮುಖಡವಾಡವನ್ನು ಬಯಲು ಮಾಡಿಕೊಂಡಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಕ್ರಮಕ್ಕೆ ಸುಪ್ರೀಂ ಕೋರ್ಟ್​ ಛೀಮಾರಿ ಹಾಕಿದೆ. ಈ ಎಲ್ಲ ಅಂಶಗಳನ್ನು ಜನತೆಗೆ ತಲುಪಿಸಬೇಕಿದೆ. ಕೋಮುವಾದಿಗಳಿಂದ ರಾಷ್ಟ್ರ ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಪ್ರಮುಖರಾದ ಶ್ರೀಪಾದ ಭಟ್​, ಅಲ್ಲಮಪ್ರಭು ಬೆಟ್ಟದೂರ, ಡಿ.ಎಚ್​.ಪೂಜಾರ, ಬಸವರಾಜ ಶೀಲವಂತರ, ಬಸವರಾಜ ನರೆಗಲ್​, ಸಂಜಯ ದಾಸ್​, ಕಾಶಪ್ಪ ಚಲುವಾದಿ, ಲಿಂಗರಾಜ ಬೆಣಕಲ್​ ಇತರರಿದ್ದರು.