ಕೊಪ್ಪಳ: ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆ (ನ.29) ಕೊಪ್ಪಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ದಲಿತ ಸಂರ್ಷ ಸಮಿತಿ ರಾಜ್ಯ ಸಂಟನಾ ಸಂಯೋಜಕ ದೇವಪ್ಪ ದೇವರಮನಿ ತಿಳಿಸಿದರು.
ಕೊಪ್ಪಳದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಾಲ್ಕೆ$ದು ಸಾವಿರ ಜನರು ಭಾಗಿಯಾಗುವರು. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಅಸ್ಪ-----ೃಶ್ಯತೆ ಆಚರಣೆ ಮುಂದುವರೆದಿದೆ. ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ ಆಗುತ್ತಿದೆ. ವಸತಿ, ಭೂ ಮಂಜೂರಾತಿ ಸಮಸ್ಯೆಗಳು ನಿವಾರಣೆಯಾಗಿಲ್ಲ. ಶಿವಪುರ ಗಡ್ಡಿ ಬಳಿ ದಲಿತರ ಜಮೀನುಗಳಿದ್ದು, ತೆರಳಲು ರಸ್ತೆಯಿಲ್ಲ. ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಇದೆ. ಇದೆಲ್ಲ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಲಾಗುವುದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಸಂಟನಾ ಸಂಯೋಜಕ ಕೆ.ಅಡಿವೆಪ್ಪ, ಜಿಲ್ಲಾ ಸಮಿತಿ ಉಸ್ತುವಾರಿ ಸಂಯೋಜಕ ಕಂಟೆಪ್ಪ ಹಣವಾಳ, ರಾಮಪ್ಪ ಗುಡ್ಲಾನೂರ, ಚಂದ್ರು ಪೂಜಾರ ಇದ್ದರು.