ಜಿಲ್ಲೆ

ಸೇನಾ ನೇಮಕಾತಿ ರ್ಯಾಲಿ ಯಶಸ್ವಿ

Kopala - Raveendra V K

ಕೊಪ್ಪಳ: ಬೆಳಗಾವಿ ವಿಭಾಗ ಮಟ್ಟದ ಸೇನಾ ನೇಮಕಾತಿ ರ್ಯಾಲಿ ನಡೆಸಲು ಕೊಪ್ಪಳ ಜಿಲ್ಲಾಡಳಿತ ಉತ್ತಮ ಸಹಕಾರ ನೀಡಿ ಯಶಸ್ವಿಗೊಳಿಸಿದೆ ಎಂದು ಬೆಂಗಳೂರಿನ ಮೇಜರ್​ ಜನರಲ್​ ಹರಿಪಿಳೈ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರ್ಯಾಲಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ದೊಡ್ಡಮಟ್ಟದ ರ್ಯಾಲಿ ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ನಿಮ್ಮೆಲರ ಸಹಕಾರ ಕಾರಣ. ನಿಜವಾದ ಪ್ರತಿಭಾವಂತರಿಗೆ ಲ ಸಿಗಬೇಕು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ನಾವು ಪ್ರೋತ್ಸಾಹಿಸಬೇಕಿದೆ. ನಮ್ಮ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ನೇಮಕಾತಿ ನಡೆಸಿರುವುದು ಪ್ರಶಂಸನೀಯ ಎಂದರು.

ಬೆಳಗಾವಿ ಡೈರೆಕ್ಟರ್​ ರಿಕ್ರೂಟಿಂಗ್​ ಎ.ಆರ್​.ಒ ಎ.ಕೆ. ಉಪಾಧ್ಯಾಯ ಮಾತನಾಡಿ, ನ.26ರಂದು ರ್ಯಾಲಿ ಆರಂಭವಾಗಿದ್ದು ಡಿ.8ಕ್ಕೆ ಕೊನೆಗೊಳ್ಳಲಿದೆ. ಬೀದರ್​, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಯಿಂದ 30 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 9,130 ಅಭ್ಯರ್ಥಿಗಳು ಪರೀೆ ಪಾಸಾಗಿ ರ್ಯಾಲಿಗೆ ಬಂದಿದ್ದಾರೆ. 7,186 ಅಭ್ಯರ್ಥಿಗಳು ರನ್ನಿಂಗನಲ್ಲಿ, 2,380 ಅಭ್ಯರ್ಥಿಗಳು ಮೆಡಿಕಲ್​ನಲ್ಲಿ ಪಾಸಾಗಿದ್ದಾರೆ. 1,878 ಅಭ್ಯರ್ಥಿಗಳು ಮೇಡಿಕಲ್​ ರಿವ್ಹಿವ್​ಗೆ ಹೋಗಿದ್ದಾರೆ. ಅಂತಿಮ ಅಭ್ಯರ್ಥಿಗಳ ಪಟ್ಟಿ ಡಿ.8ರಂದು ಸಿಗಲಿದೆ ಎಂದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಕೊಪ್ಪಳದಲ್ಲಿ ರ್ಯಾಲಿ ಹಮ್ಮಿಕೊಂಡಿದ್ದಕ್ಕೆ ಧನ್ಯವಾದಗಳು. ಇದರಿಂದ ನಮ್ಮ ಭಾಗದ ಅಭ್ಯರ್ಥಿಗಳಿಗೆ ಸೇನೆ ಸೇರಲು ಅನುಕೂಲವಾಗಲಿದೆ. ಇತರರಿಗೂ ಪ್ರೇರಣೆ ಆಗಿದೆ ಎಂದರು.

ರ್ಯಾಲಿಗೆ ಸಹಕರಿಸಿದ ಅಧಿಕಾರಿಗಳಿಗೆ ಸೇನಾಧಿಕಾರಿಗಳು ಸನ್ಮಾನಿಸಿದರು. ವಿವಿಧ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಹೆಮಂತ್​ ಕುಮಾರ್​, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಸುಬೇದಾರ ಮೇಜರ್​ ದಿನೇಶ್​ ಲೋಹಿಯಾ ಇತರರಿದ್ದರು.