ಜಿಲ್ಲೆ

ವಕ್ಫ ತಿದ್ದುಪಡಿ ಬಿಲ್​ ವಾಪಸ್​ ಪಡೆಯಲಿ

ಕೊಪ್ಪಳ: ವಕ್ಫ ತಿದ್ದುಪಡಿ ಬಿಲ್​ ವಾಪಸ್​ ಪಡೆಯುವಂತೆ ಒತ್ತಾಯಿಸಿ ಆಲ್​ ಇಂಡಿಯಾ ಮುಸ್ಲಿಮ್​ ಪರ್ಸನಲ್​ ಲಾ ಬೋರ್ಡ್​ ಜಿಲ್ಲಾ ಟಕ ಪದಾಧಿಕಾರಿಗಳು ಎಡಿಸಿ ಸಿದ್ರಾಮೇಶ್ವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರ ವಕ್ಫ ಕಾಯ್ದೆಗೆ ಮಾಡಿರುವ ತಿದ್ದುಪಡಿ ತಾರತಮ್ಯದಿಂದ ಕೂಡಿದೆ. ಮುಸ್ಲಿಮರ ಮೂಲಭೂತ ಹಕ್ಕು ಕಸಿಯಲಿದೆ. ಸಂವಿಧಾನದ 14, 25, 26 ಮತ್ತು 29ನೇ ವಿಧಿ ಆಶಯಕ್ಕೆ ವಿರುದ್ಧವಾಗಿದೆ. ಕೇವಲ 5 ವರ್ಷ ಧರ್ಮ ಪಾಲಿಸದ ಮುಸ್ಲಿಮನಿಂದ ಆಸ್ತಿದಾನ ಮಾಡುವ ಹಕ್ಕು ಕಸಿಯುತ್ತದೆ. ಸರ್ಕಾರ ವಕ್ಫ ಆಸ್ತಿ ಆಕ್ರಮಿಸಿಕೊಂಡಿದ್ದರೆ ಅದೇ ಅದರ ಮಾಲೀಕತ್ವ ಹೊಂದಲಿದೆ. ಸರ್ಕಾರದಿಂದ ನೇಮಕಗೊಂಡ ಅಧಿಕಾರಿ ಅದರ ವಿಚಾರಣೆ ನಡೆಸುತ್ತಾನೆ. ವಕ್ಫ ಮಂಡಳಿಯಲ್ಲಿ ಕೇವಲ ಮುಸ್ಲಿಮರು ಮಾತ್ರ ಸದ್ಯರಾಗಬಹುದೆಂಬ ನಿಯಮ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.

ಸಂವಿಧಾನದ ಆಶಯಕ್ಕೆ ವಿರುದ್ಧವಾದ ಹಾಗೂ ಮುಸ್ಲಿಮರ ಮೂಲಭೂತ ಹಕ್ಕು ಕಸಿಯುವ ತಿದ್ದುಪಡಿ ವಾಪಸ್​ ಪಡೆಯಬೇಕು. ಕೇಂದ್ರ ದುರುದ್ದೇಶದಿಂದ ತಿದ್ದುಪಡಿ ಮಾಡಿದೆ. ಹೀಗಾಗಿ ಬಿಲ್​ ಪಾಸ್​ ಮಾಡಬಾರದು. ರದ್ದುಪಡಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.

ಮುಸ್ಲಿಮ್​ ಧರ್ಮಗುರುಗಳಾದ ತೆಹಸೀನ್​ ಸಾಹೇಬ ತಸ್ಕಿನಿ, ಮೌಲಾನಾ ಮುಫ್ತಿ ನಜೀರ್​ ಅಹಮದ್​, ಅಸದ್​ ಮೌಲಾನಾ, ಮೌಲಾನ ಸಿರಾಹ ಅಹೆಮದ್​, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಪ್ರಮುಖರಾದ ಖತೀಬ್​ ಬಾಷು, ಅಕ್ಬರ್​ ಪಲ್ಟನ್​, ಹಿದಾಯತ್​ ಉಲ್ಲಾ, ಕೆ.ಎಂ.ಸೈಯ್ಯದ್​, ಸಲಿಂ ಖಾದ್ರಿ, ಸಾದಿಕ್​, ನಿಜಾಮ್​ ಮಾಳೆಕೊಪ್ಪ, ಫಾರೂಕ್​ ಅತ್ತಾರ ಇತರರಿದ್ದರು.